ಕೀತಿ೯ನಗರದಲ್ಲಿ ತೆಂಗಿನ ತೋಟ, ಹಾಡಿಗೆ ಬೆಂಕಿ: ಅಪಾರ ನಷ್ಟ

ಕೀತಿ೯ನಗರದಲ್ಲಿ ತೆಂಗಿನ ತೋಟ, ಹಾಡಿಗೆ ಬೆಂಕಿ: ಅಪಾರ ನಷ್ಟ


ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡ ರಸ್ತೆಯ ಸಮೀಪದಲ್ಲಿ ತೆಂಗಿನ ತೋಟವೂ ಸೇರಿದಂತೆ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದೆ. 

ಕೋಡಂಗಲ್ಲು ಪರಿಸರದ ಕೀತಿ೯ನಗರಲ್ಲಿ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದರು.

ಅದೇ ಪರಿಸರದ ಮಹಾವೀರ ಕಾಲೇಜು ಬಳಿಯಲ್ಲಿರುವ ಅನೇಕ ಮರಗಿಡಗಳು ಬೆಂಕಿಗೆ ಆಹುತಿಯಾಗಿದೆ. 

ಮನೆಗಳಿರುವ ಬಡಾವಣೆಯ ಮತ್ತೊಂದು ಭಾಗದಲ್ಲಿ ಕಾಡಿದ್ದು ಇದಕ್ಕೂ  ಸಂಜೆ ವೇಳೆ ಬೆಂಕಿ ಆವರಿಸಿಕೊಂಡು ಸಂಪೂರ್ಣ ಆಹುತಿಯಾಗಿದೆ. ರಾತ್ರಿಯ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಪ್ರಾರಂಭಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article