ಮಾಣೂರು ಕ್ಷೇತ್ರ: ತೋರಣ, ಉಗ್ರಾಣ ಮುಹೂರ್ತ
ಬೆಳಗ್ಗೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ, ನಾಂದಿ ಪ್ರಯೋಗ, ಆದ್ಯ ಗಣಯಾಗ, ಪಂಚಗವ್ಯ ಹೋಮ, ವೇದತ್ರಯ ಪಾರಾಯಣ ಪ್ರಾರಂ‘, ಕಂಕಣ ಬಂಧ ನಡೆಯಿತು. ಸಂಜೆ ಪಂಚಗವ್ಯ, ಭೂಶುದ್ಯಾದಿ, ಪ್ರಾಸಾದ ಶುದ್ಧಿ ರಾಕ್ಷೋಘ್ನಾ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಸಾದ ಬಲಿ ನೆರವೇರಿತು.
ಈ ಸಂದರ್ಭ ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಎಸ್. ಗಣೇಶ್ ರಾವ್, ಅ‘ಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಪ್ರಧಾನ ಅರ್ಚಕ ರಾಜೇಶ್ ಭಟ್, ಗೌರವಾದ್ಯಕ್ಷ ಸೀತಾರಾಮ್ ಮುಳಿಹಿತ್ಲು, ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಉಗ್ರಾಣ ಸಮಿತಿ ಸಂಚಾಲಕರಾದ ವಿನಯಾನಂದ್, ಸಹಸಂಚಾಲಕ ಶೇಷಾದ್ರಿ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಜೆ. ಮಾಣೂರು, ಮುರಳೀಧರ ಕರ್ಕೇರಾ ಕೆಂಪುಗುಡ್ಡೆ, ರಾಧಾಕೃಷ್ಣ ರಾಮರಬೈಲು, ಕೃಷ್ಣನಾಯ್ಕ್, ಉಮಾನಾಥ ಸುವರ್ಣ, ಮೋಹಿನಿ ಮೋನಪ್ಪ, ಧನವಂತಿ ವೇಣುಗೋಪಾಲ, ಜೀರ್ಣೋದ್ದಾರ ಸಮಿತಿ ಉಪಾದ್ಯಕ್ಷ ಕುಂಞಣ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೆಭವ ಪ್ರಸ್ತುತಗೊಂಡಿತು.
ಕ್ಷೇತ್ರದಲ್ಲಿ ನಾಳೆ:
ಫೆ.3 ರಂದು ಬೆಳಗ್ಗೆ 8ರಿಂದ ಮಹಾಮೃತ್ಯುಂಜಯ ಯಾಗ, ಧಾರಾವ ಗಾಹಾದಿ ಪ್ರಾಯಶ್ಚಿತ ಹೋಮ, ಗಣಯಾಗ. ಸಂಜೆ 5 ರಿಂದ ನಾಗಾಲಯ ವಸ್ತ್ವಾದಿ, ನಾಗ ಬಿಂಬಾವಾಸ, ಪ್ರೋಕ್ತಹೋಮ ನಡೆಯಲಿದೆ. ರಾತ್ರಿ 7ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.