ಸುಬ್ರಹ್ಮಣ್ಯ ಪರಿಸರದಲ್ಲಿ ಗಾಳಿ-ಮಳೆಗೆ ಹಲವೆಡೆ ಹಾನಿ

ಸುಬ್ರಹ್ಮಣ್ಯ ಪರಿಸರದಲ್ಲಿ ಗಾಳಿ-ಮಳೆಗೆ ಹಲವೆಡೆ ಹಾನಿ


ಸುಬ್ರಹ್ಮಣ್ಯ: ಶನಿವಾರ ಸಂಜೆ ಬಳಿಕ ಗಾಳಿ-ಮಳೆಗೆ ಸುಬ್ರಹ್ಮಣ್ಯ ಪರಿಸರದ ವಿವಿಧೆಡೆ ಹಾನಿ ಸಂಭವಿಸಿದೆ.

ಸುಬ್ರಹ್ಮಣ್ಯ ಸಮೀಪದ ಶಂಕರ ಮೆಸ್ತ್ರಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿದ್ದು, ಮನೆಗೂ, ಮನೆಯ ಸೊತ್ತುಗಳಿಗೂಹಾನಿಯಾಗಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಸಮಾಜಸೇವಕ ರವಿ ಕಕ್ಕೆಪದವು ಮತ್ತಿತರರು ನೆರವಿಗೆ ಧಾವಿಸಿ, ಕಾರ್ಯಾಚರಣೆ ನಡೆಸಿದ್ದಾರೆ.

ಗಾಳಿ-ಮಳೆಗೆ ಸುಬ್ರಹ್ಮಣ್ಯ ಮೆಸ್ಕಾಂ ವ್ಯಾಪ್ತಿಯ ಇಂಜಾಡಿ, ಎಡೋಳಿ, ಮಲೆಯಾಳ, ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಮುಂಡಕಜೆ ಕಡೆಗಳಲ್ಲಿ ಮರ ಬಿದ್ದು, ಮರದ ಗೆಲ್ಲು ಬಿದ್ದು ವಿದ್ಯುತ್‌ಕಂಬಗಳು, ವಿದ್ಯುತ್‌ಪರಿವರ್ತಕಗಳಿಗೆ ಹಾನಿಯಾಗಿದೆ. ಸುಬ್ರಹ್ಮಣ್ಯ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 20ರಷ್ಟುವಿದ್ಯುತ್‌ಕಂಬಗಳು ಹಾಗೂ ಒಂದು ವಿದ್ಯುತ್ ಪರಿವರ್ತಕ ಹಾನಿಗೊಂಡಿದೆ. ಮೆಸ್ಕಾಂ ವತಿಯಿಂದ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

ಗಾಳಿ ಮಳೆಗೆ ಹಲವೆಡೆ ಕೃಷಿಗೂಹಾನಿ ಸಂಭವಿಸಿದೆ. ಸಸುಬ್ರಹ್ಮಣ್ಯ, ಹರಿಹರ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು, ಏನೆಕಲ್ಲು, ನಾಲ್ಕೂರು, ಗುತ್ತಿಗಾರು ಭಾಗದಲ್ಲಿ  ಕೃಷಿ ಹಾನಿ ಸಂಭವಿಸಿದೆ. ಸುಬ್ರಹ್ಮಣ್ಯ ಸಮೀಪದ ಮಹೇಶ್‌ಎಂ.ಪಿ. ಅವರ ೫೦ ಕ್ಕೂ ಅಡಿಕೆ ಮರಗಳು, ಬಾಳೆ ಕೃಷಿ ಗಾಳಿ ಮಳೆಗೆ ನೆಲಕಚ್ಚಿದೆ. ವಸಂತ, ಮನೋಜ್, ಪ್ರವೀಣ, ದೇವಿಪ್ರಸಾದ್, ದಿನಕರ, ಗೋಪಾಲ ಸೇರಿದಂತೆ ಕುಜುಂಬಾರು, ಮಾಣಿಬ್ರ?ಲು ಪ್ರದೇಶದಲ್ಲಿ ಗಾಳಿ ಮಳೆಗೆ ಹಾನಿ ಸಂಭವಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article