ಚಲಿಸುತ್ತಿದ್ದ ಕಾರಲ್ಲಿ ದಿಢೀರನೆ ಬೆಂಕಿ: ಚಾಲಕ ಪಾರು

ಚಲಿಸುತ್ತಿದ್ದ ಕಾರಲ್ಲಿ ದಿಢೀರನೆ ಬೆಂಕಿ: ಚಾಲಕ ಪಾರು


ಉಳ್ಳಾಲ: ಚಲಿಸುತ್ತಿದ್ದ ಓಮ್ನಿ ಕಾರಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಹಿಂಬದಿ ವಾಹನ ಸವಾರನು ಅಪಾಯದ ಮುನ್ಸೂಚನೆ ನೀಡಿದ ಪರಿಣಾಮ ಓಮ್ನಿ ಚಾಲಕನು ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆ.66 ರ ಕೋಟೆಕಾರು ಅಡ್ಕ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ತಲಪಾಡಿ ನಿವಾಸಿ ರಿಯಾಝ್ ಎಂಬವರು ಗುರುವಾರ ಮಧ್ಯಾಹ್ನದಂದು ಅಡ್ಕದ ಗ್ಯಾರೇಜ್ ಒಂದರಲ್ಲಿ ದುರಸ್ಥಿಗೊಳಿಸಲಾಗಿದ್ದ ತನ್ನ ಓಮ್ನಿ ಕಾರನ್ನು ವಾಪಸು ಪಡೆದು ಪೆಟ್ರೋಲ್ ತುಂಬಿಸಿ ತಲಪಾಡಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಲ್ಲಿ ಬೆಂಕಿ ಹತ್ತಿದ ವಿಚಾರ ರಿಯಾಝ್ ಅವರ ಗಮನಕ್ಕೆ ಬಂದಿಲ್ಲ. ಈ ವೇಳೆ ಹಿಂಬದಿ ವಾಹನ ಸವಾರರೋರ್ವರು ರಿಯಾಝ್‌ಗೆ ಕಾರಲ್ಲಿ ಬೆಂಕಿ ಹಚ್ಚಿಕೊಂಡಿರುವ ವಿಚಾರ ತಿಳಿಸಿದ್ದಾರೆ.

ತಕ್ಷಣವೇ ರಿಯಾಝ್ ಅವರು ಕಾರನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಹೊರಗೆ ಓಡಿದ್ದಾರೆ. ಕ್ಷಣಾರ್ಧದಲ್ಲೇ ಕಾರು ಸಂಪೂರ್ಣ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಕಾರಲ್ಲಿ ಟ್ಯಾಂಕ್ ತುಂಬಾ ಪೆಟ್ರೋಲ್ ಇದ್ದ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article