ಟೋಲ್ ತೆರವು ಹೋರಾಟಕ್ಕೆ ಬೆಂಬಲ

ಟೋಲ್ ತೆರವು ಹೋರಾಟಕ್ಕೆ ಬೆಂಬಲ

ಬಂಟ್ವಾಳ: ಅವೈಜ್ಞಾನಿಕ ಮತ್ತು ರಾ.ಹೆ.ಪ್ರಾ.ದ ಎಲ್ಲಾ ನಿಯಮವನ್ನು ಉಲ್ಲಂಘಿಸಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವಿಗೆ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಮಾ.3 ರಂದು ನಡೆಯುವ ಹೋರಾಟಕ್ಕೆ ದ.ಕ. ಜಿಲ್ಲಾ ಟೋಲ್ ವಿರೋಧಿ ಸಮಿತಿಯ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಮಿತಿ ಅಧ್ಯಕ್ಷ ಸುಹೈಲ್ ಖಂದಕ್ ತಿಳಿಸಿದ್ದಾರೆ.

ಸೋಮವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಟೋಲ್‌ಗೇಟ್ ತೆರವಿಗಾಗಿ ಮಾಡಲಾಗುವ ಜನಪರವಾದ ಹೋರಾಟದಲ್ಲಿ ಸಮಿತಿ ಭಾಗವಹಿಸಲಿದೆ ಮತ್ತು ಟೋಲ್ ತೆರವು ಮಾಡುವವರೆಗೆ ನಿರಂತರವಾಗಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಉಮೇಶ್ ಗೌಡ ವೈ, ಧನ್ ರಾಜ್, ಹನೀಫ್ ಖಾನ್ ಕೊಡಾಜೆ, ಅನ್ವರ್ ಸಾದತ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article