ಇನ್ಸ್ಟಗ್ರಾಮ್ ನಲ್ಲಿ ಬಾಂಬ್ ಬೆದರಿಕೆ ಮೆಸೇಜ್: ಪ್ರಕರಣ ದಾಖಲು

ಇನ್ಸ್ಟಗ್ರಾಮ್ ನಲ್ಲಿ ಬಾಂಬ್ ಬೆದರಿಕೆ ಮೆಸೇಜ್: ಪ್ರಕರಣ ದಾಖಲು

ಉಳ್ಳಾಲ: ಉಳ್ಳಾಲ ಕ್ಕೆ ಬಾಂಬ್ ಇಡುತ್ತೇನೆ ಎಂದು ಶಂಕರ ಎಂಬ ಹೆಸರಿನಲ್ಲಿ ವ್ಯಕ್ತಿ ಯೊಬ್ಬ ಇನ್ಸ್ಟಗ್ರಾಮ್ ನಲ್ಲಿ ಮೆಸೇಜ್ ವೈರಲ್ ಮಾಡಿದ್ದು ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಸುಹಾಸ್ ಶೆಟ್ಟಿ ಎಂಬವರ ಇನ್ಸ್ಟಗ್ರಾಮ್ ಪೋಸ್ಟ್ ಗೆ ಶಂಕರ್ 11916 ಬಳೆಕೆದಾರ ವ್ಯಕ್ತಿ  'ಉಳ್ಳಾಲ ದಲ್ಲಿ ಬಾಂಬ್ ಇಡುತ್ತೇನೆ ಎಲ್ಲರೂ ಸಪೋರ್ಟ್ ಮಾಡಿ ' ಎಂದು ಕಾಮೆಂಟ್  ಮಾಡಿದ್ದ. 

ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ನಿರ್ವಹಿಸುತ್ತಿದ್ದ  ಸಂತೋಷ್ ದೊಡ್ಡ ಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಆ ರೋಪಿಯು  ಧರ್ಮ ಧರ್ಮಗಳ ಮಧ್ಯೆ ವೈರತ್ವ,  ಉಂಟುಮಾಡಿ ಹಿಂಸೆಗೆ ಪ್ರಚೋದಿಸಿ, ಜನರನ್ನು ಎತ್ತು ಕಟ್ಟುವಂತೆ ಮಾಡುವ ಉದ್ದೇಶದಿಂದ ಜಾಲತಾಣದ ಇನ್ಸ್ಟಗ್ರಾಮ್ ನಲ್ಲಿ. ಪ್ರಚೋಧನಾಕಾರಿಯಾಗಿ ಕಾಮೆಂಟ್ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article