ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ


ಮೂಡುಬಿದಿರೆ: ವಿಜ್ಞಾನವೆಂಬುದು ನಿನ್ನೆ, ಇಂದಿನ ಮತ್ತು ನಾಳೆಯ ನಡುವೆ ಸೇತುವೆಯಾಗಿರುವ ಶಕ್ತಿ. ಪ್ರಕೃತಿಯ ಸೌಂದರ್ಯವನ್ನು ಅರಿತು ಅನುಭವಿಸುವುದೇ ವಿಜ್ಞಾನ. ಶ್ರಮ, ಸಮರ್ಪಣೆ ಮತ್ತು ಕ್ರಮಬದ್ಧ ಅಧ್ಯಯನದ ಮೂಲಕ ಯಾವುದೇ ವಿದ್ಯಾರ್ಥಿಯೂ ಉತ್ತಮ ವಿಜ್ಞಾನಿಯಾಗಬಹುದು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್ತಿನ ಬೆಂಗಳೂರಿನ ಶಾಖೆಯ ಗೌರವ ಕಾರ್ಯದರ್ಶಿ ಡಾ. ಎಸ್. ಅನಂತ ಪದ್ಮನಾಭ ಭಟ್ ಅಭಿಪ್ರಾಯಪಟ್ಟರು.

ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗಗಳು ಕುವೆಂಪು ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಿಜವಾದ ರಾಷ್ಟ್ರೀಯತೆ ಕೇವಲ ಮಾತುಗಳಲ್ಲಿ ವ್ಯಕ್ತವಾಗುವುದಲ್ಲ, ಅದು ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ರೂಪುಗೊಳ್ಳಬೇಕು. ದೇಶದ ಭವಿಷ್ಯವು ವಿಜ್ಞಾನದ ಬೆಳವಣಿಗೆಯನ್ನು ಅವಲಂಬಿಸಿದೆ. ಜ್ಞಾನವನ್ನು ಎಷ್ಟು ಆಳವಾಗಿ ಅನ್ವೇಷಿಸುತ್ತೇವೋ ಅಷ್ಟೇ ಹೊಸ ಸಾಧನೆಗಳು ಮತ್ತು ಅನ್ವೇಷಣೆಗಳು ಹೊರಹೊಮ್ಮುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವಿಜ್ಞಾನವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ ಜನಜೀವನದಲ್ಲಿ ಅನ್ವಯವಾಗಬೇಕು. ಶಿಕ್ಷಣವು ವೈಜ್ಞಾನಿಕ ಮನೋಭಾವ, ವಿಚಾರಶೀಲತೆ ಹಾಗೂ ಪ್ರಶ್ನಿಸುವ ಧೈರ್ಯವನ್ನು ಬೆಳೆಸುವಂತಿರಬೇಕು ಎಂದರು.

ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗಗಳಿಂದ ಆಯೋಜಿಸಲ್ಪಟ್ಟ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುಕೇಶ್, ವಿವಿಧ ವಿಭಾಗಗಳ ಉಪನ್ಯಾಸಕರು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತೃತೀಯ ಬಿಎಸ್ಸಿಯ ಶ್ರಾವ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿನೆಟ್ ವಾಸ್ ಅತಿಥಿಯನ್ನು ಪರಿಚಯಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ವಸುಧಾ ಭಟ್ ಸ್ವಾಗತಿಸಿ, ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ಯೋಗೇಂದ್ರ ಎನ್. ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article