ಪಿಡಿಒ ದ್ವಿಚಕ್ರ ವಾಹನ ಕಳವು
Wednesday, March 25, 2026
ಬಂಟ್ವಾಳ: ಬಿಸಿ ರೋಡು ಸಮೀಪದ ಪರ್ಲಿಯಾ ಪಿಡಬ್ಲ್ಯುಡಿ ವಸತಿ ಗೃಹದಲ್ಲಿ ನಿಲ್ಲಿಸಲಾಗಿದ್ದ ಅಮ್ಮುಂಜೆ ಗ್ರಾಮ ಪಂಚಾಯತ್ ಪಿಡಿಒ ಅವರ ಆಕ್ಟಿವಾ ಹೋಂಡಾ ವಾಹನವನ್ನು ಕಳವುಗೈದ ಘಟನೆ ಬೆಳಕಿಗೆ ಬಂದಿದೆ.
ಪಿಡಿಒ ನಯನ ಕುಮಾರಿ ಎನ್. ಅವರ ಆಕ್ಟಿವಾ ಹೋಂಡಾ ಕಳವುಗೈಯಲಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ತನ್ನ ಮನೆಯ ಎದುರಿನ ವಸತಿ ಗೃಹದ ಶೆಡ್ಡಿನಲ್ಲಿ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದು, ಮಾ.12 ರಂದು ತಾಯಿ ಮನೆಗೆ ಹೋಗಿದ್ದು, ಮಾ.14 ರಂದು ಸಂಜೆ 5 ಗಂಟೆಗೆ ವಸತಿ ಗೃಹಕ್ಕೆ ಬಂದು ನೋಡಿದಾಗ ಹೋಂಡಾ ಆಕ್ಟಿವಾ ಅಲ್ಲೇ ಇತ್ತು. ಮಾ.15 ರಂದು ಬೆಳಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹೊರಡುವ ಸಮಯ ನೋಡುವಾಗ ಹೋಂಡಾ ಆಕ್ಟಿವಾ ಇದ್ದ ಜಾಗದಲ್ಲಿ ಇಲ್ಲದೇ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.