ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್ ಟೂರ್ನಮೆಂಟ್‌ಗಳ ಉದ್ಘಾಟನೆ
Wednesday, March 25, 2026
ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದ ಕ್ರೀಡಾ ಸಂಕೀರ್ಣ ಹಾಗೂ ಪಣಂಬೂರು ಕಡಲತೀರದಲ್ಲಿ ಆಯೋಜಿಸಲಾದ ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್ ಟೂರ್ನಮೆಂಟ್‌ಗಳು 2025-26 ಮಾ.24 ರಂದು ಸಂಜೆ ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷೆ ಎಸ್. ಶಾಂತಿ ಅವರಿಂದ ಉದ್ಘಾಟಿಸಲಾಯಿತು.
ನವ ಮಂಗಳೂರು ಬಂದರು ಪ್ರಾಧಿಕಾರದ ಮುಖ್ಯ ಜಾಗೃತಿ ಅಧಿಕಾರಿ ಪದ್ಮನಾಭಾಚಾರ್ ಕೆ., ಎನ್‌ಎಂಪಿ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಕ್ಯಾ. ಮನೋಜ್ ಜೋಶಿ, ಅಧಿಕಾರಿಗಳು, ನೌಕರರು ಹಾಗೂ ದೇಶದ ವಿವಿಧ ಪ್ರಮುಖ ಬಂದರುಗಳಿಂದ ಭಾಗವಹಿಸಿದ ತಂಡಗಳು ಉಪಸ್ಥಿತರಿದ್ದರು.