ಮೂಡೂರು-ಪಡೂರು ಜೊಡುಕರೆ ಕಂಬಳಕ್ಕೆ ಅದ್ದೂರಿಯ ಚಾಲನೆ

ಮೂಡೂರು-ಪಡೂರು ಜೊಡುಕರೆ ಕಂಬಳಕ್ಕೆ ಅದ್ದೂರಿಯ ಚಾಲನೆ


ಬಂಟ್ವಾಳ: ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಎರಡುದಿನಗಳ ‘ಬಂಟ್ವಾಳ ಕಂಬಳ’ಕ್ಕೆ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಶನಿವಾರ ಬೆಳಗ್ಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಅರ್ಚಕ ಹರಿಪ್ರಸಾದ್ ಬೊಲ್ಲುಳ್ಳಾಯ ಅವರು ಧಾರ್ಮಿಕ ವಿಧಿ, ವಿಧಾನ ನೆರವೇರಿಸಿ ಶುಭಹಾರೈಸಿದರು.

‘ಮೂಡೂರು-ಪಡೂರು’ ಜೋಡುಕರೆಯನ್ನು ದೀಪಬೆಳಗಿಸುವ ಮೂಲಕ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪ್ರದ್ಮಪ್ರಸಾದ್ ಅಜಿಲ ಅವರು ಉದ್ಘಾಟಿಸಿ, ಮಾತನಾಡಿ, ಸರಳತೆ ಮತ್ತು ಸಜ್ಜನಿಕೆಯ ವ್ಯಕ್ತಿತ್ವದ ರಮಾನಾಥ ರೈ ಅವರ ನೇತೃತ್ವದಲ್ಲಿ ಸರ್ವಧರ್ಮಿಯರ ಪಾಲ್ಗೊಳ್ಳುವಿಕೆಯ ಮೂಡೂರು-ಪಡೂರು ಕಂಬಳ ಜಿಲ್ಲೆಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯವಾಗಿದ್ದು, ಇದು ನಿರಂತರವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ವೇದಿಕಯನ್ನು ಉದ್ಘಾಟಿಸಿದ ಸೋಲೂರು ಆರ್ಯ-ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನವಿತ್ತು ಜಾತಿ, ಧರ್ಮದ ಸಂಘರ್ಷದ ಈ ಕಾಲಘಟ್ಟದಲ್ಲಿ ಏಕಾತ್ಮಕ ಚಿಂತನೆಯ ಕಂಬಳಕ್ರೀಡೆ ಸಹೋದರತೆ, ಸಾಮರಸ್ಯದ ಭಾವನೆ ಮೂಡಿಸಿದೆ.ಈ ನಿಟ್ಟಿನಲ್ಲಿ ಕಂಬಳ ಸಮಿತಿಯ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ನುಡಿದರು.

ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಸಭಾಧ್ಯಕ್ಷತೆ ವಹಿಸಿದ್ದರು.

ಅಲ್ಲಿಪಾದೆ ಸಂತ ಅಂತೋನಿ ಧರ್ಮಕೇಂದ್ರದ ಧರ್ಮಗುರು ರಾಬಟ್೯ ಡಿಸೋಜ, ಬೆಂಗಳೂರು ಪಲ್ಲೊಟಾಯನ್ ಪ್ರಾಂತ್ಯದ ಸಲಹೆಗಾರರಾದ ಗಿಲ್ಬಟ್೯ ಮಸ್ಕರೇನ್ಹಸ್, ಫರ್ಲಾ ವೆಲಂಕಣಿ ಮಾತೆ ಧರ್ಮ ಕೇಂದ್ರದ ಧರ್ಮಗುರು ಮಾಕ್೯ ಅರುಣ್ ಡಿಸೋಜ, ಕಂಬಳ ಅಸೋಸೊಯೇಶನ್‌ನ ಸಲಹೆಗಾರ ಪ್ರೊ. ಗುಣಪಾಲ ಕಡಂಬ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಉಪಾಧ್ಯಕ್ಷ ನಾರಾಯಣ ನಾಯ್ಕ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ,ಬಂಟ್ವಾಳ ಡಿವೈಎಸ್ಪಿ ಯಶುಕುಮಾರ್, ಪ್ರೊಬೇಷನರಿ ಐಪಿಎಸ್ ಅನನ್ಯ ಶ್ರಿವಾಸ್ತವ್, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಮೆಲ್ವಿನ್ ಲಸ್ರಾದೋ, ಹೊಟೇಲ್ ಉದ್ಯಮಿ ನಂಜಪ್ಪ ಶೆಟ್ಟಿ ಮೈಸೂರು, ಗಣ್ಯರಾದ ಡಾ. ರಾಜಾರಾಮ್ ಪುತ್ತೂರು, ಮಾಣಿ ಸಾಜು ಉಮೇಶ್ ಮಹಾಬಲಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಧರಣೇಂದ್ರ ಕುಮಾರ್, ಕಿರಣ್ ಶೆಟ್ಟಿ, ಜವಾಹರಲಾಲ್ ಬಾಲಮಂಚ್‌ನ ಶೈಲಜಾ ರಾಜೇಶ್, ಸಮಿತಿಯ ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ್ ಜೈನ್, ಪದ್ಮನಾಭ ರೈ ಕಲ್ಲಡ್ಕ, ಬೇಬಿ ಕುಂದರ್, ಬಿ.ಎಂ. ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಸುದರ್ಶನ್ ಜೈನ್, ರಾಜೀವ ಶೆಟ್ಟಿ ಏಡ್ತೂರು, ಪಿಲಿಪ್ ಫ್ರೆಂಕ್, ಮಹಾಬಲ ಆಳ್ವ, ಜಗದೀಶ್ ಕೊಯಿಲ, ಪಶುಸಂಗೋಪನಾ ಇಲಾಖೆಯ ಬಾಲಕೃಷ್ಣ, ಐಡಾ ಸುರೇಶ್, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಮಹಮ್ಮದ್ ನಂದಾವರ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ ಬಂಟ್ವಾಳ, ಸ್ಥಳದಾನಿಗಳು ಮತ್ತಿತರರು ಉಪಸ್ಥಿತರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಪ್ರಸ್ತಾವಿಸಿ, ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article