ಪಚ್ಚನಾಡಿ ಎಸ್.ಟಿ.ಪಿ. ಕಾಮಗಾರಿ, ಅವಗಣನೆಗೆ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ

ಪಚ್ಚನಾಡಿ ಎಸ್.ಟಿ.ಪಿ. ಕಾಮಗಾರಿ, ಅವಗಣನೆಗೆ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ

ಕಾವೂರು: ನಗರದ ಪಚ್ಚನಾಡಿ ಎಸ್.ಟಿ.ಪಿ. ಬಳಿ ಒಳಚರಂಡಿ ಕಾಮಗಾರಿ, ಉನ್ನತೀಕರಣ ಯೋಜನೆಗೆ ಹಾಗೂ ಸುರತ್ಕಲ್ ಮತ್ತು ದಕ್ಷಿಣ ಕ್ಷೇತ್ರದ ಎಸ್.ಟಿ.ಪಿ. ಮೇಲ್ದರ್ಜೆ ಚಾಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ನೀಡಿದ್ದು, ಸ್ಥಳೀಯ ಶಾಸಕನಾಗಿ ಆಹ್ವಾನ ನೀಡದೆ ಇರುವುದಕ್ಕೆ ಶಾಸಕ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೇಂದ್ರದ ಸ್ವಚ್ಛ ಭಾರತ್ ಹಾಗೂ  ಎನ್ ಜಿ ಟಿ ಅನುದಾನ 40 ಕೋಟಿ ಅನುದಾನ ಬಂದಿದೆ. ರಾಜ್ಯ ಸರಕಾರದ ಪಾತ್ರ ಕೇವಲ ಅನುಷ್ಠಾನ ಮಾತ್ರ. ಒಳಚರಂಡಿ ಯೋಜನೆಗೆ ನನ್ನ ಪ್ರಥಮ ಅವಧಿಯಲ್ಲಿ  ಕಾಮಗಾರಿಗೆ ಸಂಬಂಧಿಸಿದಂತೆ  ಪತ್ರ ಬರೆದು  ಅನುದಾನ ತರಲು ಕ್ರಮ ವಹಿಸಲಾಗಿತ್ತು ಎಂದಿದ್ದಾರೆ ಎಂದು ತಿಳಿಸಿದರು.

ಸಚಿವ ಗುಂಡೂರಾವ್ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬರುವುದೇ ಅಪರೂಪ. ಇದರ ನಡುವೆ ಸರ್ಕಾರದ ಸಭೆ, ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕ್ರಮ ಎಂಬಂತೆ  ಬಿಂಬಿಸಿ ಹೋಗುತ್ತಾರೆ ಎಂದರು.

ಸ್ಥಳೀಯ ಶಾಸಕನ್ನಾಗಿ ಪಚ್ಚನಾಡಿಯಲ್ಲಿ ನನ್ನ ಉಪಸ್ಥಿಯಲ್ಲಿ ನಡೆಯಬೇಕಿತ್ತು. ಸ್ಥಳೀಯ ಕಾಂಗ್ರೆಸ್  ನಾಯಕರ ಕುಮ್ಮಕ್ಕುನಿಂದ ಅಧಿಕಾರಿಗಳು ಕೂಡ ಮಾಹಿತಿ ನೀಡಿಲ್ಲ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಹಾಗೂ ಉತ್ತಮ ಕೆಲಸ ಕಾರ್ಯ ವನ್ನು ಕಾಂಗ್ರೆಸ್ ಗೆ ಸಹಿಸಿ ಕೊಳ್ಳ ಲಾಗುತ್ತಿಲ್ಲ.ಇದೀಗ ತಮ್ಮದೇ ಸಾಧನೆ ಎಂಬಂತೆ ಕ್ರೆಡಿಟ್ ಪಡೆಯಲು ಹವಣಿಸುತ್ತಿದೆ ಎಂದು ವ್ಯಂಗ್ಯ ವಾಡಿದರು. ಸಂಬಂಧ ಪಟ್ಟವರ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುವೆ ಎಂದು ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article