ವಿವಿ ಪದವಿ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ 4 ರ‍್ಯಾಂಕ್

ವಿವಿ ಪದವಿ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ 4 ರ‍್ಯಾಂಕ್


ಪುತ್ತೂರು: 2024-25ನೇ ಶೈಕ್ಷಣಿಕ ವರ್ಷದ ಮಂಗಳೂರು ವಿವಿ ಪದವಿ ಪರೀಕ್ಷೆಗಳಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ   ಮೂಲಕ ವಿವಿ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಅಜಿರಂಗಲ ನಿವಾಸಿ ನಾರಾಯಣ ಎ.ಕೆ ಮತ್ತು ಶೈಲಶ್ರೀ ಅವರ ಪುತ್ರಿ  ಶ್ರೀದೇವಿ ಎನ್ ಅವರು ಬಿಎಸ್ಸಿ ವಿಭಾಗದಲ್ಲಿ 4065 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಬಡಕೋಡಿ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಜೈನಾಬಿ ಅವರ ಪುತ್ರಿ ಬಿಎಸ್ಸಿ ವಿಭಾಗದಲ್ಲಿ ಆಯಿಷತ್ ಶಮಾ ಎ ಅವರು 4036 ಅಂ ಗಳಿಸಿ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.  ಬಿ.ಎ ವಿಭಾಗದಲ್ಲಿ ಮಾದ್ರಿ ಅರ್ಚನಾ ೪೧೮೬ ಅಂಕ ಗಳಿಸಿ ೮ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ. ನೆಲ್ಲಿಕಟ್ಟೆ ನಿವಾಸಿ ದಿ. ಸಬ್ಜಾನ್ ಸಾಹೇಬ್ ಮತ್ತು ಶಹೀದಾ ಅವರ ಪುತ್ರಿ  ಶೈರಿನ್ ಬಾನು ಅವರು ಬಿಬಿಎ ವಿಭಾಗದಲ್ಲಿ 3855 ಅಂಕ ಗಳಿಸುವ ಮೂಲಕ 10ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. 

ಈ ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ್ ವಂ.ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಉಪನ್ಯಾಸಕರ ಮಾರ್ಗದರ್ಶನದ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ನಾಲ್ಕು ವಿಶ್ವವಿದ್ಯಾನಿಲಯ ರ‍್ಯಾಂಕ್ ಗಳಿಸಿರುವುದು ನಮ್ಮ ಸಂಸ್ಥೆಗೆ ಅಪಾರ ಹೆಮ್ಮೆಯ ವಿಷಯ ಎಂದು ಸಾಧಕ ವಿದ್ಯಾರ್ಥಿನಿಯರನ್ನು ಶ್ಲಾಘಿಸಿದ್ದಾರೆ. 

ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ. ಪ್ರವೀಣ್  ಲಸ್ರಾದೋ, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕಾಲೇಜಿನ ಸಂಚಾಲಕರಾದ ಆದ ಅತಿ. ವಂ. ಲಾರೆನ್ಸ್ ಮಸ್ಕರೇನಸ್, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article