ಮಂಗಳೂರು ವಿಶ್ವವಿದ್ಯಾನಿಲಯ: ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟ

ಮಂಗಳೂರು ವಿಶ್ವವಿದ್ಯಾನಿಲಯ: ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟ


ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಿ.2025 ಹಾಗೂ ಜ.2026 ರಲ್ಲಿ ನಡೆಸಿದ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್ ನ ಆವರ್ತಿತ ಹಾಗೂ ಪುನರಾವರ್ತಿತ ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಮಾ.26 ರಂದು ಯುಯುಸಿಎಂಎಸ್ (UUCMS) ಮೂಲಕ ಪ್ರಕಟಿಸಲಾಗಿದೆ. ಫಲಿತಾಂಶದ ಪ್ರಕಟನೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಗುರುವಾರ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿಗಳು ತಮ್ಮ ಯುಯುಸಿಎಂಎಸ್ ಲಾಗಿನ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿ, ಮರುಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನಿಸಿ ಸದ್ಯದಲ್ಲಿಯೇ ವಿಶ್ವವಿದ್ಯಾಲಯದ ಪ್ರಕಟನೆ ಹೊರಡಿಸಲಾಗುವುದು. ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

2020 ಮತ್ತು ಅದಕ್ಕಿಂತ ಹಿಂದಿನ ಸಾಲಿನ ವಿದ್ಯಾರ್ಥಿಗಳ ಮಂಗಳೂರು ವಿವಿಯ ಜಾಲತಾಣದಲ್ಲಿ (www.mangaloreuniversity.ac.in)ನಲ್ಲಿ ಲಭ್ಯವಿರಲಿದೆ ಎಂದು ಪರೀಕ್ಷಾಂಗ ಕುಲಸಚಿವರಾದ ಪ್ರೊ. ದೇವೇಂದ್ರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article