ಹೊನ್ನನಕೇರಿ-ಸಾಲೇರಹಿತ್ಲು: ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಪನ್ನ

ಹೊನ್ನನಕೇರಿ-ಸಾಲೇರಹಿತ್ಲು: ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಪನ್ನ


ಕುಂದಾಪುರ: ಇಲ್ಲಿನ ಪಾರಿಜಾತ ‌ಸರ್ಕಲ್ ಸಮೀಪದ ಹೊನ್ನನಕೇರಿಯಲ್ಲಿರುವ ಸಾಲೇರಹಿತ್ಲು ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮಾ.20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ನಾರಾಯಣ ಹೊಳ್ಳರ ನೇತೃತ್ವದಲ್ಲಿ ಜರುಗಿತು.

ಅಂದು ಬೆಳಿಗ್ಗೆ 7ಕ್ಕೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಗಣಹೋಮ, ಪ್ರಧಾನ ಹೋಮ, ಕಲಶ ಸ್ಥಾಪನೆ, ಶ್ರೀನಾಗ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ನೆರವೇರಿತು.


11 ಗಂಟೆಗೆ ಶ್ರೀ ನಾಗದೇವರ 'ದರ್ಶನ ಸೇವೆ'ಯು ನಾಗಪಾತ್ರಿಗಳಾದ ಬಡಾಕೆರೆ ಲೋಕೆಶ್ ಅಡಿಗರವರಿಂದ ನಡೆಯಿತು. 

ಪಲ್ಲಪೂಜೆ, ತೀರ್ಥ-ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 12.30ಕ್ಕೆ ಮಹಾ "ಅನ್ನ ಸಂತರ್ಪಣೆ" ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಹೊನ್ನನಕೇರಿ ನಾಗೇಂದ್ರ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article