ಮಾ. 22ರಂದು ಮೂಡುಬಿದಿರೆಯಲ್ಲಿ ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ

ಮಾ. 22ರಂದು ಮೂಡುಬಿದಿರೆಯಲ್ಲಿ ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ


ಮೂಡುಬಿದಿರೆ: ತುಳುಕೂಟ(ರಿ), ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ, ಪ್ರೆಸ್‌ಕ್ಲಬ್‌, ಮೂಡುಬಿದಿರೆ, ಜೆಸಿಐ ಮೂಡುಬಿದಿರೆ ತ್ರಿಭುವನ್, ಸೀನಿಯ‌ರ್ ಛೇಂಬ‌ರ್ ಇಂಟರ್‌ನ್ಯಾಷನಲ್. ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ಮೂಡುಬಿದಿರೆ ಹಾಗೂ ಅಭಿಮಾನಿ ಬಳಗ ತಾಕೊಡೆ ಮತ್ತು ರಿಕ್ಷಾ ಚಾಲಕ–ಮಾಲಕರು, ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ ಮಾ. 22ರಂದು ಬೆಳಿಗ್ಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ ಕೃತಿ ಬಿಡುಗಡೆ ಮಾಡಲಿದ್ದಾರೆ.  ಗೀತಾ ಲಕ್ಷ್ಮೀಶ್ ಶೆಟ್ಟಿ ಕೃತಿ ಪರಿಚಯ ನಡೆಸಲಿದ್ದಾರೆ.

ಅಂದು ಬೆಳಿಗ್ಗೆ ಗಂಟೆ 10ರಿಂದ 11 ರವರೆಗೆ ಕವಿಗೋಷ್ಠಿ ಉದಯೋನ್ಮುಖ ಕವಿಗಳಿಂದ ನಡೆಯಲಿದೆ.

ಗೋಷ್ಠಿಯ ಅಧ್ಯಕ್ಷತೆಯನ್ನು ಸದಾನಂದ ನಾರಾವಿ ವಹಿಸಲಿದ್ದಾರೆ. ಸಾಹಿತ್ಯಾಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article