ಏ.1 ರಂದು ಮಂಗಳೂರಿನಲ್ಲಿ ಮೆರಿಟೈಮ್ ಸೆಮಿನಾರ್

ಏ.1 ರಂದು ಮಂಗಳೂರಿನಲ್ಲಿ ಮೆರಿಟೈಮ್ ಸೆಮಿನಾರ್

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಸಮುದ್ರ ಸಂಬಂಧಿತ ಸವಾಲುಗಳು ಹಾಗೂ ಭಾರತೀಯ ಬಂದರು ಕಾಯ್ದೆ-2025 ಕುರಿತು ವಿಚಾರ ಸಂಕಿರಣ ನವ ಮಂಗಳೂರು ಬಂದರು ಪ್ರಾಧಿಕಾರ ವತಿಯಿಂದ ‘ಸಮುದ್ರ ಸಂಬಂಧಿತ ಸವಾಲುಗಳು ಮತ್ತು ಹಿತಾಸಕ್ತಿದಾರರ ಪಾತ್ರ’ ಹಾಗೂ ‘ಭಾರತೀಯ ಬಂದರು ಕಾಯ್ದೆ-2025’ ವಿಷಯಗಳ ಕುರಿತು ವಿಚಾರ ಸಂಕಿರಣ ಏ.1 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ನಗರದ ಹೋಟೆಲ್ ಎ.ಜೆ. ಗ್ರ್ಯಾಂಡ್, ಆರ್ಣೇಟ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. 

ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗಲಿದೆ. ಈ ವಿಚಾರ ಸಂಕಿರಣವು ಸಮುದ್ರ ವಲಯದ ಹಿತಾಸಕ್ತಿದಾರರು, ಉದ್ಯಮ ತಜ್ಞರು, ಬಂದರು ಬಳಕೆದಾರರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತರಲು ಉದ್ದೇಶಿಸಿದ್ದು, ಸಮುದ್ರ ವಲಯದ ಉದ್ಭವಿಸುವ ಸವಾಲುಗಳು ಹಾಗೂ ಭಾರತೀಯ ಬಂದರು ಕಾಯ್ದೆ 2025 ಕುರಿತ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ದರ್ಶನ ಹೆಚ್.ವಿ. ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಂಆರ್‌ಪಿಎಲ್‌ನ ನಿರ್ದೇಶಕ (ರಿಫೈನರಿ) ನಂದಕುಮಾರ್ ವಿ. ಪಿಳ್ಳೈ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಮಾಜಿ ನಾಟಿಕಲ್ ಸಲಹೆಗಾರ ಕ್ಯಾಪ್ಟನ್ ಎಲ್.ಕೆ. ಪಾಂಡಾ ಹಾಗೂ ಮುಂಬೈ ಬಂದರು ಪ್ರಾಧಿಕಾರದ ಮಾಜಿ ಉಪ ಸಂರಕ್ಷಣಾಧಿಕಾರಿ ಕ್ಯಾ. ಆನಂದ್ ಡಬ್ಲ್ಯು. ಕರ್ಕರೆ ಅವರು ಪ್ರಮುಖ ಉಪನ್ಯಾಸಕರಾಗಿ ಭಾಗವಹಿಸಿ, ಸಮುದ್ರ ಸಂಬಂಧಿತ ಸವಾಲುಗಳು, ನಿಯಂತ್ರಣಾತ್ಮಕ ಬೆಳವಣಿಗೆಗಳು ಹಾಗೂ ಹಿತಾಸಕ್ತಿದಾರರ ಪಾತ್ರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ ಬಂದರು ಹಿತಾಸಕ್ತಿದಾರರು, ಶಿಪ್ಪಿಂಗ್ ಏಜೆಂಟರು, ಲಾಜಿಸ್ಟಿಕ್ಸ್ ಸಂಸ್ಥೆಗಳು, ಸಮುದ್ರ ವಲಯದ ತಜ್ಞರು ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article