ಮುಂಬೈ-ಮಂಗಳೂರು-ಮುಂಬೈಗೆ ಬೋಯಿಂಗ್ 737-8 ವಿಮಾನ

ಮುಂಬೈ-ಮಂಗಳೂರು-ಮುಂಬೈಗೆ ಬೋಯಿಂಗ್ 737-8 ವಿಮಾನ


ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಾ.30 ರಂದು ಮುಂಬೈ-ಮಂಗಳೂರು-ಮುಂಬೈ ಮಾರ್ಗದಲ್ಲಿ ತನ್ನ ಬೋಯಿಂಗ್ 737-8 ವಿಮಾನವನ್ನು ನಿಯೋಜಿಸಿದೆ. ‘ಫ್ಲೈಯಿಂಗ್ ಕ್ಯಾನ್ವಾಸ್’ ಎಂದು ಕರೆಯಲ್ಪಡುವ ಈ ವಿಮಾನವು ಭಾರತದಲ್ಲೇ ಮೊದಲ ಸಂಪೂರ್ಣ ಕಲಾ ಅಲಂಕೃತ ವಿಮಾನವಾಗಿದ್ದು ವಿಶೇಷ ಗಮನ ಸೆಳೆದಿದೆ.


ಈ ವಿಮಾನವನ್ನು ಪೈಲಟ್ ಇನ್ ಕಮಾಂಡ್ ಲಿಯೋನಾರ್ಡೋ ಕ್ರಿಸ್ಟೊಫರ್ ಹಾಗೂ ಸಹ ಪೈಲಟ್ ಲಿಯಾನ್ನೆ ವಾಸ್ ಅವರು ನಡೆಸಿದರು.


ಸಮಕಾಲೀನ ಕಲಾವಿದೆ ಒಶೀನ್ ಶಿವಾ ಅವರ ವಿನ್ಯಾಸ ಹೊಂದಿರುವ ಈ ವಿಮಾನವು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ‘ಟೇಲ್ಸ್ ಆಫ್ ಇಂಡಿಯಾ’ ಅಭಿಯಾನದ ಭಾಗವಾಗಿದ್ದು, ಪರಂಪರೆಯ ಅಲಂಕಾರಗಳನ್ನು ಆಧುನಿಕ ಕಲೆಯೊಂದಿಗೆ ಮಿಶ್ರಣ ಮಾಡಿ ಪ್ರಯಾಣಿಕರಿಗೆ ವಿಶಿಷ್ಟ ಸಾಂಸ್ಕೃತಿಕ ಅನುಭವ ನೀಡುತ್ತಿದೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article