ಆಳ್ವಾಸ್ ವಿದ್ಯಾರ್ಥಿಗಳನ್ನು ಒಳಗೊಂಡ ಮಂಗಳೂರು ವಿವಿ ರಾಷ್ಟ್ರೀಯ ಮಟ್ಟದ ಖೋ-ಖೋ ಪಂದ್ಯಾವಳಿಗೆ ಅರ್ಹತೆ
Monday, March 30, 2026
ಮೂಡುಬಿದಿರೆ: ದಾವಣಗೆರೆ ವಿವಿಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳನ್ನು ಒಳಗೊಂಡ ಮಂಗಳೂರು ವಿವಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಖೋ ಖೋ ಪಂದ್ಯಾಟಕ್ಕೆ ಅರ್ಹತೆ ಪಡೆದು ಕೊಂಡಿದೆ. ಇದರ ಜೊತೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯಗಳ ತಂಡಗಳು ಅರ್ಹತೆ ಪಡೆದಿವೆ.
ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯಗಳ ಈ ನಾಲ್ಕು ತಂಡಗಳ ನಡುವೆ ನಡೆದಂತಹ ಲೀಗ್ ಮಾದರಿಯ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಕ್ಯಾಲಿಕಟ್ ತಂಡದ ವಿರುದ್ಧ 14-04 ಅಂಕಗಳು ಹಾಗೂ ಇನ್ನಿಂಗ್ಸ್ ನಿಂದ ಜಯಶಾಲಿಯಾದರೆ, ಎರಡನೇ ಲೀಗ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿರುದ್ಧ 10-04 ಅಂಕಗಳು ಹಾಗೂ ಇನ್ನಿಂಗ್ಸ್‌ನಿಂದ ಜಯಶಾಲಿಯಾಗಿದೆ.
ಮಂಗಳೂರು ವಿವಿ ತಂಡದಲ್ಲಿ ಒಟ್ಟು 15 ಆಟಗಾರರಲ್ಲಿ 12 ಜನ ಆಟಗಾರರು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ಆಳ್ವಾಸ್‌ನ ಸಂಗೀತ ಗೌಡಳಿಗೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಲಭಿಸಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮುಂದಿನ ಹಂತದ ಪಂದ್ಯಕ್ಕೆ ಅರ್ಹತೆ ಪಡೆದ ತಂಡದ ಸದಸ್ಯರನ್ನು ಅಭಿನಂದಿಸಿದ್ದಾರೆ.