ಮಾ.8ರಿಂದ ಮಂಗಳಾದೇವಿ ಜಾತ್ರೋತ್ಸವ
Wednesday, March 4, 2026
ಮಂಗಳೂರು: ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ.8ರಿಂದ 13ರ ತನಕ ನಡೆಯಲಿದೆ.
ಮಾ.3ರಂದು 108 ತೆಂಗಿನಕಾಯಿ ಗಣಹೋಮ, ಮಾ.12ರಂದು 12ಕ್ಕೆ ಪೂಜೆ ಬಳಿಕ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ, ಬಲಿ, ಬಟ್ಟಲು, ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ.
ಮಾ.13ರಂದು ಬೆಳಿಗ್ಗೆ ಹರಕೆಯ ತುಲಾಭಾರ, ಬೆಳಿಗ್ಗೆ ಸೂರ್ಯೋದಯಕ್ಕೆ ಕವಾಟೊದ್ಘಾಟನೆ, ಸಂಜೆ 7ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ಮಾ.೧೪ರಂದು ಸಂಪ್ರೋಕ್ಷಣೆ, ರಾತ್ರಿ 8.30ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಲಿದೆ.
ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಉದ್ಘಾಟಿಸುವರು ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಐತಾಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.