ಶಾಸಕ ಕಾಮತ್ ನೇತೃತ್ವದಲ್ಲಿ ವಿಶ್ರಾಂತಿ ಗೃಹಕ್ಕೆ ಶಿಲಾನ್ಯಾಸ

ಶಾಸಕ ಕಾಮತ್ ನೇತೃತ್ವದಲ್ಲಿ ವಿಶ್ರಾಂತಿ ಗೃಹಕ್ಕೆ ಶಿಲಾನ್ಯಾಸ


ಮಂಗಳೂರು: ಪಾಷಾಣ ಮೂರ್ತಿ ಪಂಚಾದೇವತಾ ದೈವಸ್ಥಾನ ಬೊಕ್ಕಪಟ್ನ ಇಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ವಿಶ್ರಾಂತಿ ಗೃಹದ ಶಿಲಾನ್ಯಾಸ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.

ಬಳಿಕ ಶಾಸಕರು ಮಾತನಾಡಿ, ಇಲ್ಲಿಗೊಂದು ಸುಸಜ್ಜಿತ ವಿಶ್ರಾಂತಿ ಗೃಹದ ಅಗತ್ಯವಿರುವ ಬಗ್ಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರು. ಅದರಂತೆ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.

ಬಿಜೆಪಿ ಪ್ರಮುಖರಾದ ದಿನೇಶ್, ಕಿರಣ್ ರೈ, ವಿನೋದ್ ಮೆಂಡನ್, ಹಾಗೂ ಪುರುಷೋತ್ತಮ ಕೋಟ್ಯಾನ್, ನಾರಾಯಣ ಕೋಟ್ಯಾನ್, ಚಂದ್ರಶೇಖರ ಕೋಟ್ಯಾನ್, ಗಿರಿಧರ್ ಕೋಟ್ಯಾನ್, ಕುಮಾರ್ ಕೋಟ್ಯಾನ್, ಗಂಗಾಧರ ಕೋಟ್ಯಾನ್ ಸೇರಿದಂತೆ ಬೊಕ್ಕಪಟ್ನದ ಕೋಟ್ಯಾನ್ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article