ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರಿಗೆ ಎಂಎಂಎ-ಕೆವಿಕೆ ಪ್ರಶಸ್ತಿ
ಅವರು ಶನಿವಾರ ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಂಎಂಎ) ವತಿಯಿಂದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಎಂಎಂಎ-ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದರು.
ಡಾ. ಎಂ.ಎನ್. ರಾಜೇಂದ್ರ ಕುವಾರ್ ಪ್ರಶಸ್ತಿ ಸ್ವೀಕರಿಸಿ ವಾತನಾಡಿ, ಇದು ನನಗೆ ದೊರಕಿದ ತಾಯ್ನಾಡಿನ ಗೌರವವಾಗಿದೆ. ಈ ಹಿಂದೆ ಬ್ರಿಟನ್ ಪಾರ್ಲಿಮೆಂಟ್ ಸಹಿತ ದೇಶ-ವಿದೇಶಗಳಲ್ಲಿ ಪ್ರಶಸ್ತಿ ಸ್ವೀಕರಿಸಿದ್ದೆ. ಅಷ್ಟೇ ಸಂತೋಷ ಈಗಲೂ ಆಗುತ್ತಿದೆ. ನಾನು ಬಹಳ ಹೆಚ್ಚೇನೂ ಕಲಿತವನಲ್ಲ. ಆದರೂ, ಚಾರ್ಟರ್ಡ್ ಅಕೌಂಟೆಂಟ್‌ಗಳಿಗಿಂತಲೂ ಉತ್ತಮವಾಗಿ ಬ್ಯಾಲೆನ್ಸ್‌ಶೀಟ್ ನಿರ್ವಹಣೆ ವಾಡಬಲ್ಲೆ. ನಾವುಯ ಮಾತ್ರವಲ್ಲ ನಮ್ಮೊಂದಿಗೆ ಮತ್ತೊಬ್ಬರನ್ನೂ ಬೆಳೆಸಬೇಕು ಎನ್ನುವ ಧ್ಯೇಯ ನನ್ನದು ಎಂದು ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಡಾ. ರವ್ಯಾ ಶೆಟ್ಟಿ, ಡಾ. ಅರುಣ್ ಕುವಾರ್ ಶೆಟ್ಟಿ, ಡಾ. ಪ್ರಮೀಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಶನ್ ಅಧ್ಯಕ್ಷ ಎಡ್ವರ್ಡ್ ಜಿ. ಕೊಯಲ್ಹೊ ಸ್ವಾಗತಿಸಿದರು. ವಿನ್ಸೆಂಟ್ ಡಿಸೋಜಾ ಪ್ರಸ್ತಾವನೆಗೈದರು. ವಾಜಿ ಅಧ್ಯಕ್ಷ ಕೆ. ಜಯರಾಜ್ ಬಿ. ರೈ ಪರಿಚಯಿಸಿದರು.