ಪೆಟ್ರೋಲ್, ಡೀಸೆಲ್ ಅಬಕಾರಿ ಶುಲ್ಕ ಇಳಿಕೆ-ಕೇಂದ್ರ ಸರ್ಕಾರದ ಜನಹಿತ ನಡೆ: ಸತೀಶ್ ಕುಂಪಲ

ಪೆಟ್ರೋಲ್, ಡೀಸೆಲ್ ಅಬಕಾರಿ ಶುಲ್ಕ ಇಳಿಕೆ-ಕೇಂದ್ರ ಸರ್ಕಾರದ ಜನಹಿತ ನಡೆ: ಸತೀಶ್ ಕುಂಪಲ

ಮಂಗಳೂರು: ಇರಾನ್ ಮತ್ತು ಅಮೇರಿಕಾ, ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತಿರುವ ಸಂಧರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕವನ್ನು 10 ರೂ. ಮತ್ತು ಡೀಸೆಲ್ ಶುಲ್ಕವನ್ನು ಶೂನ್ಯಕ್ಕೆ ಇಳಿಕೆ ಮಾಡಿರುವುದು ಜನಹಿತದ ನಡೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ಶಕ್ತಿಗೆ ಕುಂದು ಬಾರದಂತೆ ಮತ್ತು ಜನರ ಹಿತವನ್ನು ಸದಾ ಚಿಂತನೆಯನ್ನು ನಡೆಸುವ ಸರ್ಕಾರ ದೇಶದಲ್ಲಿರುವುದು ನಮ್ಮ ಸೌಭಾಗ್ಯವಾಗಿದೆ. ದೇಶದ ಭದ್ರತೆಗೆ ದಕ್ಕೆ ಬಂದಾಗ ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ, ಕರೋನಾ ಸಮಯದಲ್ಲಿ ಉಚಿತ ಲಸಿಕೆ, ಉಚಿತ ಅಕ್ಕಿ, ಧಾನ್ಯ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದ ಜನರಿಗೆ ಭಾದೆ ಬಾರದಿರಲು ತೈಲ ಶುಲ್ಕದಲ್ಲಿ ಕಡಿತ ಮಾಡಿರುವುದು ಪ್ರಾಮಾಣಿಕತೆ ಮತ್ತು ಬದ್ಧತೆ ಇರುವ ಸರ್ಕಾರದಿಂದ ಮಾತ್ರ ಸಾಧ್ಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೆ ಮತ್ತೆ ನಿರೂಪಿಸುತ್ತಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article