ಬಾಲ ನ್ಯಾಯ ಕಾಯಿದೆ: ಪ್ರತಿ ಶನಿವಾರ ಪೂರ್ಣ ಕಲಾಪ
Monday, March 2, 2026
ಮಂಗಳೂರು: ಬಾಲ ನ್ಯಾಯ ಕಾಯಿದೆ ವಿಶೇಷ ನ್ಯಾಯ ಮಂಡಳಿ ನ್ಯಾಯಾಲಯವು ಮಂಗಳೂರಿನಲ್ಲಿ ಪ್ರತಿ ಶನಿವಾರ ಪೂರ್ಣ ಕಲಾಪ ನಡೆಸಲಿದೆ.
ಬಾಲ ನ್ಯಾಯ ಕಾಯಿದೆಯಡಿ ದಾಖಲಾದ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿನಿ ಎಂ. ಅತ್ತಿಹೊಳಿ ಅವರು ಈ ಆದೇಶ ಹೊರಡಿಸಿದ್ದಾರೆ.