ನಾಳೆ ಚಂದ್ರಗ್ರಹಣ: ಪಿಲಿಕುಳದಲ್ಲಿ ವೀಕ್ಷಣೆ

ನಾಳೆ ಚಂದ್ರಗ್ರಹಣ: ಪಿಲಿಕುಳದಲ್ಲಿ ವೀಕ್ಷಣೆ

ಮಂಗಳೂರು: ಮಾ.3 ರಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಅಂದು ಮಧ್ಯಾಹ್ನ ಸುಮಾರು 3.20ಕ್ಕೆ ಚಂದ್ರ ಗ್ರಹಣವು ಆರಂಭವಾಗಲಿದ್ದು, ಸಂಜೆ ಸುಮಾರು 6.47 ಗಂಟೆಗೆ ಗ್ರಹಣವು ಮುಕ್ತಾಯಗೊಳ್ಳುತ್ತದೆ. 

ಈ ದಿನ ಚಂದ್ರೋದಯವು ಸಂಜೆ ಸುಮಾರು 6.40 ಗಂಟೆಗೆ ಆಗುತ್ತಿದ್ದು, ಗ್ರಹಣ ಗೋಚರವು ಮಳೆ, ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಕೆಲವು ನಿಮಿಷಗಳ ಕಾಲ ಗೋಚರಿಸಲಿದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. 

ಇದರ ಪ್ರಯುಕ್ತ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಜೆ 6.30 ಗಂಟೆಯಿಂದ ರಾತ್ರಿ 8.30ರ ವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಈ ಸಮಯದಲ್ಲಿ ಕಾಣಲಿರುವ ಗುರು, ಶನಿ ಗ್ರಹಗಳಲ್ಲದೆ ಚಂದ್ರನ ಕುಳಿಗಳನ್ನು ಸಹ ವೀಕ್ಷಿಸಬಹುದು. ವಿಜ್ಞಾನ ಕೇಂದ್ರದ ಆವರಣದಲ್ಲಿ ಇವುಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮತ್ತು ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಸಿಬ್ಬಂದಿಗಳು ನೀಡುತ್ತಾರೆ. 

ಬರಿಗಣ್ಣಿನಿಂದ ಇವುಗಳನ್ನು ನೋಡಬಹುದಾದರೂ ದೂರದರ್ಶಕದಿಂದ ನೋಡುವುದು ಬೇರೆಯೇ ಅನುಭವ ನೀಡುತ್ತದೆ. ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article