NITK ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಇ-ಮೊಬಿಲಿಟಿ ವಾಹನ ಹಸ್ತಾಂತರ
ಬಳಿಕ ಸುಧೀರ್ ಕುಮಾರ್ ಮಾತನಾಡಿ, ಪ್ರಮುಖ ಸಂಸ್ಥೆಗಳಾದ ಎನ್‌ಐಟಿಕೆಗಳಲ್ಲಿ ಪ್ರವೇಶ ಪಡೆಯುವ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸಂಚಾರವು ಮತ್ತೊಂದು ಸವಾಲಾಗಿದೆ. ಅದಕ್ಕಾಗಿ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್ ಇ-ಮೊಬಿಲಿಟಿ ಸೈಕಲ್‌ಗಳು ಮತ್ತು ವೀಲ್‌ಚೇರ್‌ಗಳನ್ನು ಪ್ರಾಯೋಜಿಸಿದೆ. ಇವುಗಳನ್ನು ಎನ್‌ಐಟಿಕೆ ಸಂಸ್ಥೆಯೊಳಗೆ ಆಪ್ ಆಧಾರಿತ ನಿಯಂತ್ರಣ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ತಯಾರಿಸಲಾಗಿದೆ. ನನ್ನ ಅಲ್ಮಾ ಮೇಟರ್‌ನೊಂದಿಗೆ ಸಹಭಾಗಿತ್ವ ಸಾಧಿಸಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು.
ನಿರ್ದೇಶಕ ಪ್ರೊ. ಬಿ. ರವಿ ಮಾತನಾಡಿ, ದಿವ್ಯಾಂಗ ವಿದ್ಯಾರ್ಥಿಗಳಿಗೆ ಸಂಚಾರದ ಸೌಲಭ್ಯ ಒದಗಿಸಲು ಪೆಟ್ರೋನೆಟ್ ನೀಡಿರುವ ಅSಖ ಬೆಂಬಲವನ್ನು ನಾವು ಸ್ವಾಗತಿಸುತ್ತೇವೆ. ಇದರಿಂದ ಅವರು ತರಗತಿಗಳಿಗೆ ಹಾಜರಾಗಲು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕ್ಯಾಂಪಸ್‌ನಲ್ಲಿ ಸ್ವತಂತ್ರವಾಗಿ ಸಂಚರಿಸಬಹುದು. ವಿಶೇಷವಾಗಿ, ಈ ಇ-ಮೊಬಿಲಿಟಿ ವಾಹನಗಳು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಎನ್‌ಐಟಿಕೆ ಸಂಸ್ಥೆಯಲ್ಲಿಯೇ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಅಭಿವೃದ್ಧಿಪಡಿಸಲಾಗಿದೆ ಎಂಬುದು ನನಗೆ ಸಂತೋಷ ತಂದಿದೆ. ಇದು ಕೈಗಾರಿಕೆ-ಶೈಕ್ಷಣಿಕ ಸಂಸ್ಥೆಗಳ ಸಹಕಾರದಿಂದ ಸಮಾಜಕ್ಕೆ ನೀಡಬಹುದಾದ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು.
ಪೆಟ್ರೋನೆಟ್‌ನ ಹಿರಿಯ ಅಧಿಕಾರಿಗಳಾದ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಸೈಸುಧಮ್ಯೀ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಉದಯ ಪೈ ಮತ್ತಿತರರು ಉಪಸ್ಥಿತರಿದ್ದರು.