ಬಾಂಬ್ ಬೆದರಿಕೆ: ಕಮಿಷನರ್‌ಗೆ ದರ್ಗಾ ಸಮಿತಿ ದೂರು
Monday, March 2, 2026
ಉಳ್ಳಾಲ: ಜುಮಾ ಮಸ್ಜಿದ್ ಹತ್ತಿರ ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟು ಕೋಮು ಸೌಹಾರ್ದವನ್ನು ಕೆಡಿಸಲು ಯತ್ನಿಸಿದ ಕಿಡಿಗೇಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳೂರು ಪೊಲೀಸ್ ಕಮಿಷನರ್‌ಗೆ ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ದೂರು ನೀಡಿದೆ.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು.