ಚಂದ್ರಗ್ರಹಣ: ಕುಕ್ಕೆಯಲ್ಲಿ ದರ್ಶನ ಮತ್ತು ಸೇವಾದಿಗಳ ಸಮಯದಲ್ಲಿ ವ್ಯತ್ಯಯ
Monday, March 2, 2026
ಸುಬ್ರಹ್ಮಣ್ಯ: ಮಾ.3 ರಂದು ಚಂದ್ರಗ್ರಹಣದ ಪ್ರಯುಕ್ತ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಹಾಗೂ ಸೇವಾದಿಗಳ ಸಮಯದಲ್ಲಿ ವ್ಯತ್ಯಯ ಉಂಟಾಗಲಿದ್ದು, ಮಾ.2 ಮತ್ತು ಮಾ.3 ರಂದು ಸರ್ಪಸಂಸ್ಕಾರ ಪೂಜೆ ಪ್ರಾರಂಭ ಇರುವುದಿಲ್ಲ.
ಮಾ.3 ರಂದು ದೇವಳದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ, ಅಂದಿನ ಮದ್ಯಾಹ್ನದ ಮಹಾಪೂಜೆ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ದೇವಳದ ಬಾಗಿಲು ಹಾಕಲಾಗುವುದು. ರಾತ್ರಿ 7 ಗಂಟೆಯ ನಂತರ ರಾತ್ರಿ ಪೂಜೆ ನಡೆಯಲಿದೆ.
ಮಾ.3 ರಂದು ಬೆಳಗ್ಗಿನ ಫಲಾಹಾರ 9 ಗಂಟೆಗೆ ಮುಕ್ತಾಯ, ಮಧ್ಯಾಹ್ನ ಭೋಜನ ನಿಷಿದ್ಧ ಹಾಗೂ ರಾತ್ರಿ ಭೋಜನವಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.