ಮಾ.28 ರಂದು ಮೂಡುಬಿದಿರೆಯಲ್ಲಿ 23ನೇ ವಷ೯ದ ಸಾವ೯ಜನಿಕ ಶ್ರೀ ಶನೈಶ್ಚರ ಪೂಜೆ
Friday, March 27, 2026
ಮೂಡುಬಿದಿರೆ: ವಿಶ್ವಹಿಂದು ಪರಿಷತ್-ಬಜರಂಗದಳ, ಮಾತೃಶಕ್ತಿ-ದುಗಾ೯ವಾಹಿನಿ ಮೂಡುಬಿದಿರೆ ಪ್ರಖಂಡದ ಇಪ್ಪತ್ತಮೂರನೇ ವಷ೯ದ ಸಾವ೯ಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಧಾಮಿ೯ಕ ಸಭೆಯು ಮಾ. 28 ರಂದು ಸಂಜೆ ಮೂಡುಬಿದಿರೆ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಅಚ೯ಕ ಶ್ರೀ ಶಿವಾನಂದ ಶಾಂತಿ ಅವರ ನೇತೃತ್ವದಲ್ಲಿ ಶನೈಶ್ಚರ ಪೂಜೆಯ ಧಾಮಿ೯ಕ ವಿಧಿವಿಧಾನಗಳು ನಡೆಯಲಿದೆ.
ರಾತ್ರಿ ನಡೆಯುವ ಧಾಮಿ೯ಕ ಸಭೆಯಲ್ಲಿ ಸಾಮಾಜಿಕ ಕಾಯ೯ಕತ೯ ಪಾಥ೯ಸಾರಥಿ ಧಾಮಿ೯ಕ ಉಪನ್ಯಾಸ ನೀಡಲಿದ್ದಾರೆ. ಉದ್ಯಮಿ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ವಿಹಿಂಪ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಕಾಯಾ೯ಧ್ಯಕ್ಷ ಕೆ. ಶ್ಯಾಮ ಹೆಗ್ಡೆ, ಉಪಾಧ್ಯಕ್ಷ ಎಂ. ಶಾಂತರಾಮ ಕುಡ್ವ, ಪ್ರಧಾನ ಕಾಯ೯ದಶಿ೯ ಸುಚೇತನ್ ಜೈ ನ್ ಉಪಸ್ಥಿತರಿರುವರು.
ಸಭಾ ಕಾಯ೯ಕ್ರಮದ ನಂತರ ಸುಪ್ರಸಿದ್ದ ಕಲಾವಿದರನ್ನೊಳಗೊಂಡ ತೆಂಕುತಿಟ್ಟಿನ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ "ನಮೋ ರಘುವಂಶದೀಪ"ಬಯಲಾಟ ನಡೆಯಲಿದೆ.