ಮೂಡುಬಿದಿರೆಯಲ್ಲಿ ಆಟೋ ಢಿಕ್ಕಿ; ಪಾದಚಾರಿಗೆ ಗಂಭೀರ ಗಾಯ

ಮೂಡುಬಿದಿರೆಯಲ್ಲಿ ಆಟೋ ಢಿಕ್ಕಿ; ಪಾದಚಾರಿಗೆ ಗಂಭೀರ ಗಾಯ


ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ವಿದ್ಯಾಗಿರಿ-ಮೂಡುಬಿದಿರೆ  ಗಾಂಧಿನಗರದಲ್ಲಿ  ಶುಕ್ರವಾರ ರಾತ್ರಿ ಆಟೋ ರಿಕ್ಷಾವೊಂದು  ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದಾರೆ.

ಗಾಂಧಿನಗರದ ಕರ್ದಬೆಟ್ಟು ನಿವಾಸಿ ಶಂಕರ್ ಆಚಾರ್ಯ ಗಾಯಗೊಂಡ ವ್ಯಕ್ತಿ. ಅವರು ಶುಕ್ರವಾರ ರಾತ್ರಿ ಮೂಡುಬಿದಿರೆ ಕಡೆಯಿಂದ ಗಾಂಧಿನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶೇಖರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರತೆಗೆ ಶಂಕರ್ ಆಚಾರ್ಯ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article