ಮಾರ್ಚ್ 8ರಂದು ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

ಮಾರ್ಚ್ 8ರಂದು ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‌ವತಿಯಿಂದ ಮಾರ್ಚ್ 08ರಂದು ಬೆಳಗ್ಗೆ 10ರಿಂದ 1 ಘಂಟೆಯವರೆಗೆ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಹೈಡ್ರೋಸಿಲ್, ಮೂಲವ್ಯಾಧಿ, ಹರ್ನಿಯ, ಥೈರಾಯ್ಡ್ ಸಮಸ್ಯೆ, ಮಧುಮೇಹ ಪಾದದ ಚಿಕಿತ್ಸೆ, ಅಬ್ಸೆಸ್ ಡ್ರೆನೇಜ್, ಪಿತ್ತ ಕೋಶದ ಕಲ್ಲುಗಳ ಚಿಕಿತ್ಸೆ, ಸ್ತನದ ಗಡ್ಡೆ/ ಕ್ಯಾನ್ಸರ್ ಶಸ್ತçಚಿಕಿತ್ಸೆ ಸೇರಿದಂತೆ ಮುಂತಾದ ರೋಗಗಳಿಗೆ ಉಚಿತ ಶಸ್ತç ಚಿಕಿತ್ಸೆ ಹಾಗೂ  ತಜ್ಞರ ಸಲಹೆ ಲಭಿಸಲಿದೆ.

ಹೊಟ್ಟೆ ನೋವು, ವಿಶೇಷವಾಗಿ ಬಭಾಗದಲ್ಲಿ ತೀವ್ರ ನೋವು, ಹೊಟ್ಟೆಯಲ್ಲಿ ಅಥವಾ ದೇಹದ ಬೇರೆ ಭಾಗದಲ್ಲಿ ಗಡ್ಡೆ, ಹರ್ನಿಯದ ಲಕ್ಷಣಗಳು,ಮಲಬದ್ಧತೆ ಜೊತೆಗೆ ರಕ್ತ ಸ್ರಾವ, ಮಲದ್ವಾರದಲ್ಲಿ ನೋವು/ಉಬ್ಬರಗಳ ಸಂಧರ್ಭದಲ್ಲಿ ಸಾಮಾನ್ಯ ಶಸ್ತç ಚಿಕಿತ್ಸೆಯ ಅಗತ್ಯವಿರುವುದರಿಂದ ಈ ಶಿಬಿರದ ಮೂಲಕ ಉಚಿತ ಶಸ್ತçಚಿಕಿತ್ಸೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.   ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ  9945722671 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article