ಅಖಿಲ ಭಾರತ ಅಂತರ್ ವಿವಿ ದೇಹದಾರ್ಢ್ಯ ಸ್ಪರ್ಧೆ: ಮಂಗಳೂರು ವಿ.ವಿ ಚಾಂಪಿಯನ್-ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿಗೆ ಚಿನ್ನದ ಪದಕ ಹಾಗೂ ಪ್ರಥಮ್ ಪೂಜಾರಿಗೆ ಬೆಳ್ಳಿಯ ಪದಕ

ಅಖಿಲ ಭಾರತ ಅಂತರ್ ವಿವಿ ದೇಹದಾರ್ಢ್ಯ ಸ್ಪರ್ಧೆ: ಮಂಗಳೂರು ವಿ.ವಿ ಚಾಂಪಿಯನ್-ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿಗೆ ಚಿನ್ನದ ಪದಕ ಹಾಗೂ ಪ್ರಥಮ್ ಪೂಜಾರಿಗೆ ಬೆಳ್ಳಿಯ ಪದಕ


ಮೂಡುಬಿದಿರೆ: ಆಂಧ್ರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿ, 90 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ಪ್ರಥಮ್ 65 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಗಮನಾರ್ಹ ಸಾಧನೆಯಿಂದ ಮಂಗಳೂರು ವಿ.ವಿ. ಚಾಂಪಿಯನ್ ಪಟ್ಟ ಅಲಂಕರಿಸಿತು. 


ಕಿಶನ್ ಶೆಟ್ಟಿ ಅಂತರ್ ಕಾಲೇಜು ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಿಸ್ಟರ್ ಮಂಗಳೂರು  ವಿವಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.  ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article