ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ ಉಡುಪಿ ಅಗ್ನಿಶಾಮಕದ ಪ್ರಮುಖ ಅಗ್ನಿಶಾಮಕ ಸತೀಶ್
Thursday, March 5, 2026
ಮೂಡುಬಿದಿರೆ: ಕರ್ತವ್ಯ ಅವಧಿಯಲ್ಲಿ ಕರ್ತವ್ಯ ನಿಷ್ಠೆ ಹಾಗೂ ಇಲಾಖೆಯು ನೀಡಿರುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸಿರುವ ಉಡುಪಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕನಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಅವರು 2025ರ ಸಾಲಿನ ಗೌರವಾನ್ವಿತ ಮುಖ್ಯಮಂತ್ರಿ ಅವರ ಚಿನ್ನದ ಪದಕವನ್ನು ಆರ್. ಎ. ಮುಂಡ್ಯಾರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ತರಬೇತಿ ಮಹಾವಿದ್ಯಾಲಯ, ಬನ್ನೇರುಘಟ್ಟ ಮಹಾವಿದ್ಯಾಲಯದ ಸಭೆಯಲ್ಲಿ ಗೌರವನ್ವಿತ ಗ್ರಹಸಚಿವ ಡಾ. ಜಿ. ಪರಮೇಶ್ವರ್ ಅವರ ಹಸ್ತದಿಂದ ಪದಕವನ್ನು ಪಡೆದುಕೊಂಡಿದ್ದಾರೆ.
ಸತೀಶ್ ಅವರು 2005 ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಆರ್. ಎ. ಮುಂಡ್ಯಾರು ತರಬೇತಿ ವಿದ್ಯಾಲಯದಲ್ಲಿ ತರಬೇತಿ ಪಡೆದು 2006 ರಲ್ಲಿ ಮೂಡುಬಿದಿರೆ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕನಾಗಿ ಕರ್ತವ್ಯ ನಿರ್ವಹಿಸಿ, 2018 ರಲ್ಲಿ ಪ್ರಮುಖ ಅಗ್ನಿಶಾಮಕನಾಗಿ ಮೈಸೂರು ಹೆಬ್ಬಾಳ ಅಗ್ನಿಶಾಮಕ ಠಾಣೆಗೆ ಪದೋನ್ನತಿ ವರ್ಗಾವಣೆ ಪಡೆದು, ಈಗ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಕರ್ತವ್ಯದ ಅವಧಿಯಲ್ಲಿ ಜನರ ಪ್ರಾಣ ರಕ್ಷಣೆ ಹಾಗೂ ಅಸ್ತಿ ಪಾಸ್ತಿಗಳ ರಕ್ಷಣೆಗಾಗಿ ಇಲಾಖೆಯು ಹಲವಾರು ನಗದು ಪುರಸ್ಕಾರ, ಪ್ರಶಾಂಸನ ಪತ್ರ ಹಾಗೂ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪ್ರಶಸ್ತಿಗೆ ಬಾಜನರಾಗಿತ್ತಾರೆ. ಇಲಾಖೆಯು ಉತ್ತಮ ಹಾಗೂ ನಿಷ್ಠೆ ಸೇವೆಗಾಗಿ, ತುರ್ತು ಪರಿಸ್ಥಿತಿಯಲ್ಲಿ ಶ್ರೇಷ್ಟ ಕಾರ್ಯಕ್ಕಾಗಿ ಭಾರತ ಸರ್ಕಾರ ಗ್ರಹ ಮಂತ್ರಾಲಯ ನೀಡಿರುವ ಗೌರವಪೂರ್ವಕ DG FS BRONZE DISC & COMMENDATION CERTIFICATE ಪದಕವನ್ನು ಮಾನ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಶಕರು, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬೆಂಗಳೂರು, ಅವರ ಅಮೃತ ಹಸ್ತದಿಂದ ಪಡೆದಿರುತ್ತಾರೆ
