ರಾಜ್ಯದ ಬಡ ಜನರಿಗೆ, ಕೃಷಿಕರಿಗೆ ನಿರಾಸೆ ಉಂಟು ಮಾಡಿದ ಬಜೆಟ್: ದಿನೇಶ್ ಪುತ್ರನ್
Friday, March 6, 2026
ಮೂಡುಬಿದಿರೆ: ರಾಜ್ಯ ಸರಕಾರ ಮಂಡಿಸಿರುವ ಈ ಬಜೆಟ್ ಜನಸಾಮಾನ್ಯರಿಗೆ, ಕಷಿಕರಿಗೆ ನಿರಾಸೆ ಉಂಟು ಮಾಡಿದೆ. ಮಧ್ಯಮ ವರ್ಗದ ಜನರಿಗೂ ಕೃಷಿಕರಿಗೆ ಈ ಬಜೆಟ್ ನಿಂದ ಯಾವ ಪ್ರಯೋಜನವೂ ಇಲ್ಲದಂತ್ತಾಗಿದೆ.
ರಾಜ್ಯ ಕಾಂಗ್ರೆಸ್ ಸರಕಾರ ತಾರತಮ್ಯ ಮಾಡಿರುವಂತದ್ದು ರಾಜ್ಯದ ಜನತೆ ಬೇಸರ ಉಂಟು ಮಾಡಿದೆ ಒಟ್ಟಾಗಿ ಈ ಬಜೆಟ್ ಅಮಾವಾಸ್ಯೆಯಂದು ಚಂದ್ರನ ಹುಡುಕುವಂತೆ ಆಗಿದೆ ಎಂದು ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದ್ದಾರೆ.