ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕ ಬಜೆಟ್: ರಮಾನಂದ ಶೆಟ್ಟಿಗಾರ್

ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕ ಬಜೆಟ್: ರಮಾನಂದ ಶೆಟ್ಟಿಗಾರ್

ಶಿರ್ವ: ಮೂಲ ಸೌಕರ್ಯ ಅಭಿವೃದ್ಧಿಗೆ (ರಸ್ತೆ, ಮೆಟ್ರೋ, ನಗರಾಭಿವೃದ್ಧಿ) ದೊಡ್ಡಮಟ್ಟದ ಹೂಡಿಕೆ ಘೋಷಿಸಲಾಗಿದೆ. ಸಾಮಾಜಿಕ ಕಲ್ಯಾಣ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ನಿಧಿ ಮೀಸಲಿಡಲಾಗಿದೆ. ಕೈಗಾರಿಕೆ, ಉದ್ಯೋಗ ಸೃಷ್ಠಿ ಮತ್ತು ಸ್ಟಾರ್ಟ್‌ಅಪ್ ಪ್ರೋತ್ಸಾಹಕ್ಕೆ ವಿಶೇಷ ಕಾರ್ಯಕ್ರಮಗಳನ್ನು  ಘೋಷಿಸಲಾಗಿದೆ.

ತೆರಿಗೆ ಕಡಿತ ಅಥವಾ ಮಧ್ಯಮ ವರ್ಗಕ್ಕೆ ನೇರ ತೆರಿಗೆ ಸಡಿಲಿಕೆ ಕುರಿತು ದೊಡ್ಡ ಘೋಷಣೆಗಳಿಲ್ಲ. ಸಣ್ಣ ಉದ್ಯಮಗಳು ಮತ್ತು ವ್ಯಾಪಾರಿಗಳಿಗೆ ವಿಶೇಷ ಪ್ರೋತ್ಸಾಹ ಪ್ಯಾಕೇಜ್‌ಗಳಿಗೆ ಹೆಚ್ಚಿನ ಒತ್ತು ಕಾಣಲಿಲ್ಲ. ರಾಜ್ಯದ ಆದಾಯ ಹೆಚ್ಚಿಸಲು ಮದ್ಯದ ಮೇಲಿನ ಎಕ್ಸೈಸ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮದ್ಯ ಮಾರಾಟದಿಂದ ರಾಜ್ಯಕ್ಕೆ ಹೆಚ್ಚುವರಿ ಆದಾಯ ಸಂಗ್ರಹಿಸುವುದು ಸರ್ಕಾರದ ಉದ್ದೇಶ. ಸಾಮಾಜಿಕ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಆದಾಯ ಬಳಸಲಾಗುತ್ತದೆ. ಪರೋಕ್ಷವಾಗಿ ಕುಡಿತಕ್ಕೆ ಪ್ರೋತಾಹ ನೀಡಿದಂತಲ್ಲವೇ..? ಎಂದು ಶಿರ್ವದ ತೆರಿಗೆ ಸಲಹೆಗಾರ ರಮಾನಂದ ಶೆಟ್ಟಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article