ಕೃಷಿಗೆ ನಿರಾಶದಾಯಕ ಬಜೆಟ್: ರಾಮಕೃಷ್ಣ ಶರ್ಮಾ ಬಂಟಕಲ್ಲು
Friday, March 6, 2026
ಶಿರ್ವ: ಬಜೆಟ್‌ನಲ್ಲಿ ರೈತರಿಗೆ ಬೇಕಾಗುವ ಯೋಜನೆಗಳು ಏನೇನೂ ಸಾಲದು. ಕರಾವಳಿ ಕರ್ನಾಟಕ ಕೃಷಿ ಅಭಿವೃದ್ಧಿಗೆ ವಿಶೇಷ ಯೋಜನೆ ಅಗತ್ಯವಿತ್ತು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಕೃಷಿ ಕಾಲೇಜು ಬಗ್ಗೆ ಪ್ರಸ್ತಾಪವೇ ಇಲ್ಲ. ಹಿಂದಿನ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಶೂನ್ಯ ದರದಲ್ಲಿ 5 ಲಕ್ಷದ ವರೆಗೆ ಕೃಷಿ ಸಾಲ ಕೊಡಬೇಕಾಗಿತ್ತು. ಕರಾವಳಿಯ ತೋಟಗಾರಿಕೆ ಮತ್ತು ಭತ್ತದ ಕೃಷಿಗೆ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯ ಇತ್ತು. ಕೃಷಿ ಅಭಿವೃದ್ಧಿಗೆ ಪೂರಕವಾದ ವಿಷಯಗಳೇ ಇಲ್ಲದೆ ಒಂದು ನಿರಾಶದಾಯಕ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.