ಅಂತರ್ ಕಾಲೇಜು ರಾಜ್ಯ ಮಟ್ಟದ ‘ವಿಜ್ಞಾನ ಸಿಂಚನ-2026’ ಉತ್ಸವಕ್ಕೆ ಚಾಲನೆ

ಅಂತರ್ ಕಾಲೇಜು ರಾಜ್ಯ ಮಟ್ಟದ ‘ವಿಜ್ಞಾನ ಸಿಂಚನ-2026’ ಉತ್ಸವಕ್ಕೆ ಚಾಲನೆ


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ‘ವಿಜ್ಞಾನ ಸಿಂಚನ-2026’ ಭಾರತೀಯ ಜ್ಞಾನ ಪರಂಪರೆ ವಿಷಯದಡಿಯಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಅಂತರ್ ಕಾಲೇಜುಗಳ ರಾಜ್ಯಮಟ್ಟದ ಸ್ಪರ್ಧಾ ಉತ್ಸವಕ್ಕೆ ಪುತ್ತೂರಿನ ಎಸ್.ಆರ್.ಕೆ ಲ್ಯಾಡರ್ಸ್ ಮಾಲಕ ಕೇಶವ್ ಅಮೈ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಯಬೇಕು. ಕೌಶಲ್ಯಗಳು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದರ ಜತೆಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿ ಜೀವನ ಹಲವು ಪ್ರಯತ್ನ ಮತ್ತು ಪ್ರಯೋಗಗಳಿಗೆ ದೊಡ್ಡ ವೇದಿಕೆ. ಇಲ್ಲಿ ನಡೆಯುವ ಸರಿ ತಪ್ಪುಗಳು ನಮಗೆ ಭವಿಷ್ಯದ ಬದುಕಿಗೆ ಪಾಠವಾಗಬೇಕು. ಇತ್ತೀಚಿನ ದಿನಗಳಲ್ಲಿ ಪರಸ್ಪರ ಸಂವಹನ, ಸಂಬಂಧ ಕುಂಠಿತವಾಗುತ್ತಿದೆ. ಮಾನವ ಸಂಬಂಧ ಬೆಸೆಯಲು ಹಾಗೂ ವಿದ್ಯಾರ್ಥಿಗಳು ಸಾಮಾಜಿಕವಾಗಿ ತೆರೆದುಕೊಳ್ಳಲು ಸಮೂಹ ಸಂಪರ್ಕ ಮತ್ತು ಸಂವಹನ ಅತ್ಯವಶ್ಯಕ. ದೀಪದ ಬೆಳಕು ಹೇಗೆ ಮೇಲ್ಮುಖವಾಗಿ ಉರಿದು ಪ್ರಜ್ವಲಿಸುತ್ತದೆಯೋ ವಿದ್ಯಾರ್ಥಿಗಳ ಬದುಕು ಹಾಗೆಯೇ ಸದಾ ಪ್ರಜ್ವಲಿಸುತ್ತಿರಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾತನಾಡಿ, ಸಮಾಜದ ಸಾಧಕರ ಜೀವನ ನಮಗೆಲ್ಲರಿಗೂ ಪ್ರೇರಣೆ. ಈ ಪ್ರೇರಣೆ ವಿದ್ಯಾರ್ಥಿಗಳಲ್ಲೂ ಜಾಗರೂಕವಾಗಬೇಕೆಂದು ಕಾಲೇಜಿನ ಆಡಳಿತ ಮಂಡಳಿ ಸದಾ ಸಾಧಕರು ಮತ್ತು ಗಣ್ಯ ವ್ಯಕ್ತಿಗಳನ್ನು ಕಾಲೇಜಿನ ವೇದಿಕೆಗೆ ಕರೆತಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಲು ಅನುವು ಮಾಡಿಕೊಡುತ್ತದೆ. ಸಾಧಕರ ವ್ಯಕ್ತಿತ್ವ ನಮ್ಮ ವ್ಯಕ್ತಿತ್ವವನ್ನೂ ರೂಪಿಸಲಿ, ವಿದ್ಯಾರ್ಥಿಗಳು ಪ್ರತಿ ಕ್ಷೇತ್ರದಲ್ಲೂ ಆಸಕ್ತಿದಾಯಕರಾಗಿ ಕಾರ್ಯೋನ್ಮುಖವಾಗಲಿ ಎಂದರು.

ಕಾಲೇಜಿನ ಉಪ ಪ್ರಾಂಶುಪಾಲೆ ನಂದ ಕುಮಾರಿ, ವಿಜ್ಞಾನ ವಿಭಾಗದ ಡೀನ್ ಡಾ. ಸವೀತಾ, ಜೈವತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಬಡಿಗೇರ, ವಿದ್ಯಾರ್ಥಿ ಸಂಯೋಜಕ ವರುಣ್, ಗಾನವಿ ಮತ್ತು ಪವನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article