‘ಮೋಟೊ ಕ್ರಾಸ್ 2026’ ಬೈಕ್ ರೇಸ್‌ಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ
Monday, April 13, 2026
ಬಂಟ್ವಾಳ: ಟೀಮ್ ಸತ್ಯಜಿತ್ ಸುರತ್ಕಲ್ ಇದರ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆದ ‘ಮೋಟೊ ಕ್ರಾಸ್ 2026’ ಬೈಕ್ ರೇಸ್‌ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬೈಕ್ ರೇಸ್ ಮೂಲಕ ಯುವಕರಿಗೆ ಧೈರ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಕಾರ್ತವ್ಯವನ್ನು ಟೀಮ್ ಸತ್ಯಜಿತ್ ತಂಡ ಮಾಡುತ್ತಿರುವುದು ಅಭಿನಂದನೆಯವಾಗಿದೆ ಈ ತಂಡದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ, ವಕೀಲರಾದ ಶೈಲಜಾ ರಾಜೇಶ್ ಮಾತನಾಡಿದರು.
ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೇಖರ್ ಭಂಡಾರಿ, ಹಿಂದೂ ಮುಖಂಡರಾದ ರವಿರಾಜ್ ಬಿ.ಸಿ. ರೋಡ್, ಶರ್ಮಿಳಾ ಅನಂತ್ ಪೊಳಲಿ, ಸಂತೋಷ್ ಪೊಳಲಿ, ಟೀಮ್ ಸತ್ಯಜಿತ್ ಸಂಘಟನೆಯ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಗುರುರಾಜ್ ಬಂಟ್ವಾಳ ಉಪಸ್ಥಿತರಿದ್ದರು.
ಹರ್ಷಿತ್ ಪಲ್ಲಮಜಲು ಸ್ವಾಗತಿಸಿ, ರಾಜೀವ ಕಕ್ಕೆ ಪದವು ಕಾರ್ಯಕ್ರಮ ನಿರೂಪಿಸಿದರು.