ಮಗನಿಂದ ತಂದೆಯ ಕೊಲೆಗೆ ಯತ್ನ, ಆರೋಪಿ ಬಂಧನ

ಮಗನಿಂದ ತಂದೆಯ ಕೊಲೆಗೆ ಯತ್ನ, ಆರೋಪಿ ಬಂಧನ

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎ.21 ರಂದು ನಡೆದಿದೆ.

ಗಾಯಗೊಂಡ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ, ಮಗ ಭರತ್ (25)ನ್ನು ಪೊಲೀಸರು ಬಂಧಿಸಿದ್ದಾರೆ.

ಉಜಿರೆ ಗ್ರಾಮದ ಮಣಿಕೆ ನಿವಾಸಿ, ಗಾರೆ ಕೆಲಸ ಮಾಡುತ್ತಿರುವ ನಾರಾಯಣ (52) ಹಾಗೂ ಟಿಂಬರ್ ಕೆಲಸ ಮಾಡುತ್ತಿದ್ದ ಮಗ ಭರತ್ ನಡುವೆ ಮನೆಯಲ್ಲಿ ಗಲಾಟೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಮನೆಯ ಹೊರಭಾಗದಲ್ಲಿದ್ದ ತಂದೆಗೆ ಮಗ ಭರತ್ ಕತ್ತಿಯಿಂದ ಕುತ್ತಿಗೆ ಮತ್ತು ಕೈಗೆ ಕಡಿದಿದ್ದಾನೆ.

ತಕ್ಷಣ ಪಕ್ಕದ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article