ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್., ಸಮ್ಮೇಳನದ ರೂಪುರೇಷೆ ಹಾಗೂ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಮಾತನಾಡಿ, ಬ್ಯಾರಿ ಆಂದೋಲನ, ಅಕಾಡೆಮಿಗಾಗಿ ಶ್ರಮಿಸಿದ ನಾಯಕರು ಹಾಗೂ ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ನೆನಪಿಸಿಕೊಂಡ ಅವರು ಮುಂದೆ ನಡೆಯುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ. ರಹೀಂ, ಕೋಶಾಧಿಕಾರಿ ಮುಹಮ್ಮದ್ ಸಾಗರ್, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು.
ಬ್ಯಾರಿ ಪ್ರಮುಖರಾದ ಯೂಸುಫ್ ಕರಂದಾಡಿ, ಮೂನಿಷ್ ಅಲಿ ಬಂಟ್ವಾಳ, ಹನೀಫ್ ಬಗ್ಗುಮೂಲೆ, ಅಬ್ದುಲ್ ಮಜೀದ್ ಕಡೆಗೋಳಿ, ಮಹಮ್ಮದ್ ನಂದಾವರ, ಇಬ್ರಾಹಿಂ ಕೈಲಾರ್, ಅಬೂಬಕರ್ ಅಮ್ಮುಂಜೆ, ಚಿಕ್ ಖಲೀಲ್ ಬಂಟ್ವಾಳ, ಪಿ.ಮಹಮ್ಮದ್ ಪಾಣೆಮಂಗಳೂರು, ಅಲ್ತಾಫ್ ಡೈಮಂಡ್, ಉಮರ್ ಮಂಚಿ, ಮುಹಮ್ಮದ್ ಸುರಿಬೈಲು, ಯು.ಮುಸ್ತಫಾ ಆಲಡ್ಕ, ಹನೀಫ್ ನಂದರಬೆಟ್ಟು ಮೊದಲಾದವರು ವಿವಿಧ ಸಲಹೆ ನೀಡಿದರು.
ಬ್ಯಾರಿ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯಅಬೂಬಕ್ಕರ್ ಅನಿಲಕಟ್ಟೆ ವಂದಿಸಿದರು.