ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ


ಬಂಟ್ವಾಳ: 2023ರ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರದೇ ದೇಶದ ಮಹಿಳೆಯರಿಗೆ ಸುಳ್ಳು ಹೇಳಿ ದ್ರೋಹ ಮಾಡಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ದ.ಕ. ಗ್ರಾಮೀಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ, ಅಧ್ಯಕ್ಷ ಹುದ್ದೆ ನೀಡಿದೆ, ಆದರೆ ಬಿಜೆಪಿಯಾಗಲಿ ಅಥವಾ ಆರ್.ಎಸ್.ಎಸ್. ಆಗಲಿ ಮಹಿಳೆಯರಿಗೆ ನೀಡಿದ ಅವಕಾಶಗಳ ಬಗ್ಗೆ ತಿಳಿಸಲಿ ಬಿಜೆಪಿ ಮಹಿಳೆಯರ ಮೀಸಲಾತಿ ವಿಚಾರವನ್ನು ಜನರ ಮುಂದಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ವಿಚಾರಗಳಿಲ್ಲದೆ ಕೊರತೆಗಳನ್ನು ಎದುರುಸುತ್ತಿದ್ದು, ಇದನ್ನು ನಿವಾರಿಸಲು ಮಹಿಳಾ ಮೀಸಲಾತಿ ತಂತ್ರವನ್ನು ಮಾಡಿದ್ದಲ್ಲದೆ, ಕಾಂಗ್ರೆಸ್‌ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧ್ಯಕ್ಷೆ ಉಷಾ ಅಂಚನ್, ಪಕ್ಷದ ಪ್ರಮುಖರಾದ ಆರ್. ಪದ್ಮರಾಜ್, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ನಾಯಕರಾದ ಐಡಾ ಸುರೇಶ್, ಅಮಿತಾ ಭಂಡಾರಿ, ಆಸ್ಮಾ ಹಸೈನಾರ್, ಎ.ಬಿ. ಅಬ್ದುಲ್ಲಾ ಕೊಳ್ನಾಡು, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಧನಲಕ್ಷ್ಮೀ ಸಿ.ಬಂಗೇರ, ಜೆಸಿಂತಾ ಡಿಸೋಜ, ಶಬನಾ ಕಾವಳಕಟ್ಟೆ, ಎಂ.ಎಸ್. ಮಹಮ್ಮದ್, ಸಾರಿಕಾ ಪೂಜಾರಿ, ಮಂಜುಳಾ ಕುಶಲ ಪೆರಾಜೆ, ಸುದೀಪ್ ಶೆಟ್ಟಿ, ಬಾಲಕೃಷ್ಣ ಅಂಚನ್, ಝೀನತ್ ಬೆಳ್ತಂಗಡಿ, ಚಂದ್ರಶೇಖರ ಭಂಡಾರಿ, ಜಯಂತಿ ಪೂಜಾರಿ, ಸುದರ್ಶನ ಜೈನ್, ಪಿ.ಬಿ. ವರ್ಗೀಸ್, ಮೋಹನ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಶೋಭಾ ಶೆಟ್ಟಿ, ಸಿರಾಜ್ ಮದಕ, ಸಿದ್ದೀಕ್ ಸರವು, ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article