ಮಿತ್ತ ಮಜಲು ಕ್ಷೇತ್ರದಲ್ಲಿ ವಾರ್ಷಿಕ ಬಿಸುಜಾತ್ರೆಯ ಕೋಳಿಗುಂಟ

ಮಿತ್ತ ಮಜಲು ಕ್ಷೇತ್ರದಲ್ಲಿ ವಾರ್ಷಿಕ ಬಿಸುಜಾತ್ರೆಯ ಕೋಳಿಗುಂಟ


ಬಂಟ್ವಾಳ: ಸಜೀಪಮಾಗಣೆಯ ಮಿತ್ತ ಮಜಲು ಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ಬಿಸುಜಾತ್ರೆ ಪ್ರಯುಕ್ತ ಕೋಳಿಗುಂಟ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭ ಕಾಂತಾಡಿಗುತ್ತು ಗಡಿ ಪ್ರದಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರುಗುತ್ತು ಶಿವರಾಮ ಭಂಡಾರಿ, ಸಜೀಪಗುತ್ತು ಗಡಿ ಪ್ರಧಾನರಾದ ಕಾಳ ಶೆಟ್ಟಿ ಯಾನೆ ಮುತ್ತಣ್ಣ ಶೆಟ್ಟಿ, ನಗ್ರೀಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ ಶೆಟ್ಟಿ, ಜೀವನ್ ಆಳ್ವ, ಹರೀಶ್ ರೈ. ದೇವಿ ಪ್ರಸಾದ್ ಪೂಂಜಾ, ಎಸ್. ಶ್ರೀಕಾಂತ ಶೆಟ್ಟಿ, ಕೊಚ ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ, ಗುತ್ತು ಮನೆತನದವರು ಹಾಗೂ ಚಾಕ್ರಿ ವರ್ಗದವರು ಉಪಸ್ಥಿತರಿದ್ದರು.

ಎ.12 ರಂದು ಕ್ಷೇತ್ರದಲ್ಲಿ ಕೊಡಿ ಚೆಂಡು ಅಗರಿಮಾಡ, ಅಲಾಡಿ ಖಾನ ನೇಮೋತ್ಸವ ಎ.13 ರಂದು ನಗ್ರೀಮಾಡ ನೇಮೋತ್ಸವ, ಎ.14 ರಂದು ಕ್ಷೇತ್ರ ಮಿತ್ತ ಮಜಲು ಕಡೆ ಚೆಂಡು, ಶ್ರೀ ದೈವಂಗಳ ವಲಸಾರಿ, ಶ್ರೀ ನಾಲ್ಕೈತಾಯ ದೈವದ ಮೆಚ್ಚಿ, ಎ.15 ರಂದು ದೈವಂಗಳ ಕೆರೆ ನೇಮ, ಎ.16 ರಂದು ಶ್ರೀ ದೈವಂಗಳ ಉಡುಕು ಬಲಿ, ಅನ್ನದಾನ ರಾತ್ರಿ ಪರಿವಾರ ದೈವಗಳ ನೇಮ ಜರಗಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article