ಪೊಳಲಿ ಕ್ಷೇತ್ರ ಸಂಪರ್ಕದ ಅಮ್ಮುಂಜೆಗುತ್ತು-ಉಳಿಪಾಡಿಗುತ್ತು ಸಂಪರ್ಕ ರಸ್ತೆಯ ಲೋಕಾರ್ಪಣೆ

ಪೊಳಲಿ ಕ್ಷೇತ್ರ ಸಂಪರ್ಕದ ಅಮ್ಮುಂಜೆಗುತ್ತು-ಉಳಿಪಾಡಿಗುತ್ತು ಸಂಪರ್ಕ ರಸ್ತೆಯ ಲೋಕಾರ್ಪಣೆ


ಬಂಟ್ವಾಳ: ಶ್ರೀಕ್ಷೇತ್ರ ಪೊಳಲಿಯ ಆಡಳಿತದ ಪ್ರಮುಖ ಮನೆತನಗಳಲ್ಲೊಂದಾದ ಅಮ್ಮುಂಜೆಗುತ್ತುವಿನ ಸಂಪರ್ಕ ರಸ್ತೆಯನ್ನು ಬಂಟ್ವಾಳ ಶಾಸಕರ ನಿಧಿ 10 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರ ಲೋಕಾರ್ಪಣೆಯನ್ನು ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು ನೆರವೇರಿಸಿದರು.

ಅಮ್ಮುಂಜೆಗುತ್ತು ಮತ್ತು ಉಳಿಪಾಡಿಗುತ್ತು ಶ್ರೀಕ್ಷೇತ್ರ ಪೊಳಲಿಯ ಎರಡು ಪ್ರಮುಖ ಆಡಳಿತದ ಗುತ್ತು ಮನೆತನಗಳಾಗಿದ್ದು ಧಾರ್ಮಿಕ ಮತ್ತು ಐತಿಹಾಸಿಕವಾಗಿ ಅವಿನಾಭಾವ ಸಂಬಂಧ ಹೊಂದಿದೆ. ಈಗ ಅಮ್ಮುಂಜೆಗುತ್ತುವಿನ ಸಂಪರ್ಕ ರಸ್ತೆ ಶಾಸಕರ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ಹೆಮ್ಮೆಯ ವಿಚಾರ ಎಂದು ರಂಗನಾಥ್ ಶೆಟ್ಟಿ ಅಮ್ಮುಂಜೆಗುತ್ತು ಹೇಳಿದರು.

ಪೊಳಲಿಯ ಆಡಳಿತ ಮೊಕ್ತೇಸರರಾದ ಡಾ. ಎ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ರವಿಂದ್ರ ಶೆಟ್ಟಿ ಅಮ್ಮುಂಜೆಗುತ್ತು, ಪ್ರತಾಪ್ ಶೆಟ್ಟಿ ಅಮ್ಮುಂಜೆಗುತ್ತು, ದೇವದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆಗುತ್ತು, ಜೀವರಾಜ್ ಶೆಟ್ಟಿ, ಸುಕೇಶ್ ಚೌಟ ಬಡಕ ಬೈಲ್, ಶೋಭಾ ಶೆಟ್ಟಿ ಅಮ್ಮುಂಜೆಗುತ್ತು ಕಾರ್ತಿಕ್ ಬಲ್ಲಾಳ್ ಅಮ್ಮುಂಜೆ, ಶಿಕ್ಷಕ ಹರೀಶ್ ರಾವ್ ಡಿ.ಎ. ಭೂತ್ ಅಧ್ಯಕ್ಷ ಹರೀಶ್ಚಂದ್ರ ಅಮುಂಜೆ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಅಮ್ಮುಂಜೆ ಸನತ್ ಜೆರ್ಲಾಗುಡ್ಡೆ, ಉದಯ್ ಕಣಿಯೂರ್, ಜಯಂತ್ ಅಮ್ಮುಂಜೆ ವಾಮನ ಆಚಾರ್ಯ,ಸುದರ್ಶನ ಭಂಡಾರಿ, ಪ್ರಕಾಶ್ ದಾಸೀಮಾರ್, ಯೋಗೀಶ್ ಬೆಂಜನಪದವು, ಕೃಷ್ಣ ಬಂಗೇರ ಉಪಸ್ಥಿತರಿದ್ದರು. ಜನಾರ್ದನ ಅಮ್ಮುಂಜೆ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article