ವಿಶ್ವ ರಿಲೇ ಚಾಂಪಿಯನ್‌ಶಿಪ್ ಸ್ಪರ್ಧೆ: ತೀರ್ಥೇಶ್ ಶೆಟ್ಟಿ ಆಯ್ಕೆ
Friday, April 24, 2026
ಬಂಟ್ವಾಳ: ಸೌತ್ ಆಫ್ರಿಕಾದ ಬೋಟ್ಸ್ ವಾನದಲ್ಲಿ ಮೇ.2 ರಂದು ನಡೆಯಲಿರುವ ವಿಶ್ವ ರಿಲೇ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೊಯಿಲ ನಿವಾಸಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ ತೀರ್ಥೇಶ್ ಶೆಟ್ಟಿ ಅವರು ಪುರುಷರ 4*400 ಮೀ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅವರು ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಭಾರತದ ರಾಷ್ಟ್ರೀಯ ಸೀನಿಯರ್ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತೀರ್ಥೇಶ್ ಅವರು ಕೊಯಿಲ ಪ್ರಶಾಂತ್ ಶೆಟ್ಟಿ, ಸವಿತ ದಂಪತಿಯ ಪುತ್ರ.