ತೋಟಕ್ಕೆ ನೀರು ಬಳಸದಂತೆ ಪುರಸಭೆ ಸೂಚನೆ
Friday, April 24, 2026
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಬೊಂಡಾಲ, ನರಹರಿ ಪರ್ವತ, ಬೋಳಂಗಡಿ ಪ್ರದೇಶ, ಬಿ.ಕಸ್ಬಾ ಗ್ರಾಮದ ನೇರಂಬೋಳು ಮತ್ತು ಬಿ.ಮೂಡ ಗ್ರಾಮದ ಕೈಕಂಬ ಎತ್ತರ ಪ್ರದೇಶದಲ್ಲಿ ನೀರು ಸರಬರಾಜು ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ನೀರು ಪೂರೈಕೆಯಾಗದೆ ತೊಂದರೆ ಉಂಟಾಗಿರುತ್ತದೆ.
ಸಾರ್ವಜನಿಕರು ತೋಟಕ್ಕೆ ಸಹಿತ ಇನ್ನಿತರ ಉದ್ದೇಶಗಳಿಗೆ ಬಳಸದಂತೆ ಪುರಸಭೆಯಿಂದ ಸೂಚಿಸಲಾಗಿದೆ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನೀರನ್ನು ಶಾಶ್ವತವಾಗಿ ರದ್ದುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿಯವರ ಪ್ರಕಟಣೆ ತಿಳಿಸಿದೆ.