ಪೊಳಲಿಯಲ್ಲಿ ಮಹಾರಥೋತ್ಸವ: ತಿಂಗಳ ಜಾತ್ರೆ ಸಂಪನ್ನ
Monday, April 13, 2026
ಬಂಟ್ವಾಳ: ಸಾವಿರ ಸೀಮೆಯಒಡತಿ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ 29 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಜಾತ್ರೋತ್ಸವ ಶನಿವಾರ ರಾತ್ರಿ ಸಂಪನ್ನಗೊಂಡಿದೆ.
ಸಂಜೆ ಮಹಾರಥೋತ್ಸವದಲ್ಲಿ ದೇವರು ರಥಾರೂಢರಾದ ಬಳಿಕ ಭಕ್ತರು ದೇವಳದ ಸುತ್ತ ರಥವನ್ನು ಎಳೆಯುವ ಮೂಲಕ ಸಂತೃಪ್ತರಾದರು. ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ದೇವರ ರಥೋತ್ಸವದ ಬಳಿಕ ಜಾತ್ರೆ ಸಂಪನ್ನವಾಗಿದೆ.
ಕೊನೆಯ ದಿನ ಸಾಗರೋಪಾದಿಯಲ್ಲಿ ಪೊಳಲಿಗೆ ಆಗಮಿಸಿದ ಭಕ್ತರು ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.ಇದೇ ವೇಳೆ ಸುಡುಮದ್ದು ಪ್ರದರ್ಶನವು ಗಮನಸೆಳೆಯಿತು.
ಈ ಸಂದರ್ಭ ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿವರ್ಯರು, ಪ್ರಧಾನ ಅರ್ಚಕರಾದ ಮಾಧವ ಭಟ್, ಹಿರಿಯ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್, ಅದರ್ಶ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರಾ ಸೂರ್ಯ ನಾರಾಯಣ ರಾವ್, ವಿವಿಧ ಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್, ಮಾಜಿ ಸಚಿವ ಬಿ. ರಮಾನಾಥ ರೈ, ಸುಭಾಶ್ಚಂದ್ರ ನಾಯ್ಕ್ ಉಳಿಪಾಡಿಗುತ್ತು ಹಾಗೂ ದೇವಳದ ಪ್ರಮುಖರು, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಕೃಷ್ಣ ಕುಮಾರ್ ಪೂಂಜಾ ಫರಂಗಿಪೇಟೆ, ಬಿಜೆಪಿ ಮುಖಂಡ ಸಂಜಯ ಪ್ರಭು ಸಹಿತ ಹಲವಾರು ಗಣ್ಯರು ದೇವರದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಎ.12 ರಂದು ಅವಭೃತ ಸ್ನಾ ಹಾಗೂ ಮಗೃಂತಾಯ ನೇಮ ನಡೆಯಲಿದೆ.


