ಬಿ.ಸಿ.ರೋಡಿನಲ್ಲಿ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಪ್ರತಿಭಟನೆ

ಬಿ.ಸಿ.ರೋಡಿನಲ್ಲಿ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಪ್ರತಿಭಟನೆ


ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಟಿಸಿಎಸ್ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಪ್ರತಿಭಟನೆ ಬಿ.ಸಿ ರೋಡಿನಲ್ಲಿ ಶನಿವಾರ ರಾತ್ರಿ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಹಿಂದೂ ನಾಯಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಹಿಂದೂ ಸಮಾಜ ಲವ್ ಜಿಹಾದ್‌ನ ಪ್ರಕರಣಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ದವಿದ್ದು, ಇದೇ ರೀತಿ ಮುಂದುವರಿದರೆ ತೀವ್ರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮಾತನಾಡಿ, ಸಾವಿರಾರು ವರ್ಷಗಳಿಂದ ಹಿಂದೂ ಸಮಾಜ ನಿರಂತರವಾಗಿ ಆಕ್ರಮಣಗಳನ್ನು ಎದುರಿಸಿಕೊಂಡು ಬದುಕಿ ಉಳಿದಿದೆ. ಇದೀಗ ಜಿಹಾದಿಶಕ್ತಿಗಳು ತಮ್ಮ ಬಣ್ಣ ಬದಲಾಯಿಸಿ 2047ಕ್ಕೆ ಭಾರತವನ್ನು ಇಸ್ಲಾಮಿಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಶಾಲಾ ಕಾಲೇಜು, ಜಿಮ್‌ಗಳು ಸಾರ್ವಜನಿಕ ಕ್ಷೇತ್ರವಾದ ಕಾರ್ಪೋರೆಟ್ ಕಂಪನಿಗಳ ಮೂಲಕ ಲವ್ ಜಿಹಾದ್‌ಗಳನ್ನು ಮಾಡುತ್ತ ನಿರಂತರವಾಗಿ ಆಕ್ರಮಣ ಮುಂದುವರಿದಿದೆ. ಇದನ್ನು ಸಮರ್ಥವಾಗಿ ಎದುರಿಸಲು ಹಿಂದೂ ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ನರಸಿಂಹ ಮಾಣಿ ಮಾತನಾಡಿ, ನಮ್ಮ ಸಮಾಜದ ರಕ್ಷಣೆಗೆ ನಾವು ಕಟಿಬದ್ದರಾಗಬೇಕಾಗಿದೆ ಎಂದು ಹೇಳಿದರು.

ಹಿಂದೂ ಮುಖಂಡರಾದ ಸರಪಾಡಿ ಅಶೋಕ್ ಶೆಟ್ಟಿ, ಶ್ರೀಧರ್ ತೆಂಕಿಲ, ರಾಜರಾಮ್ ಐತಾಳ್ ಕಲ್ಲಡ್ಕ, ಗೋವಿಂದ ಪ್ರಭು ಬಂಟ್ವಾಳ, ಪ್ರಶಾಂತ್ ಕೆಂಪುಗುಡ್ಡೆ, ಸುದರ್ಶನ್ ಬಜ, ಬಂಟ್ವಾಳ ಪ್ರಖಂಡದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಈ ಸಂಧರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article