ಯುವಕನ ಮೃತದೇಹ ಪತ್ತೆ: ಪ್ರಕರಣ ದಾಖಲು

ಯುವಕನ ಮೃತದೇಹ ಪತ್ತೆ: ಪ್ರಕರಣ ದಾಖಲು

ಕಾಸರಗೋಡು: ಯುವಕನೋರ್ವನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ನಡೆದಿದೆ.

ಮುಂಡಿತ್ತಡ್ಕ ಬಾಪಲಿಪೋನ ಪಾಡ್ಲಡ್ಕದ ಸಫಾಯತ್ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಸೀತಾಂಗೋಳಿ ಪೇಟೆಯ ನಿರ್ಜನ ಸ್ಥಳದ ಕಟ್ಟಡದ ಹಿಂಬದಿಯಲ್ಲಿ ಇಂದು ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಸಫಾಯತ್ ಅವರು ಕೋಳಿ ಸಾಗಾಟ ವಾಹನದ ಚಾಲಕರಾಗಿ ದುಡಿಯುತ್ತಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದು, ಸಮೀಪದ ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article