ಮಂಗಳೂರು ವಿಶ್ವವಿದ್ಯಾನಿಲಯ ವೈಟ್ ಲಿಫ್ಟಿಂಗ್: ಚಾಂಪಿಯನ್‌ಶಿಪ್‌ನಲ್ಲಿ ಎಸ್‌ಡಿಎಂ ಸಿಬಿಎಂ ಕಾಲೇಜಿಗೆ ರನ್ನರ್ಸ್ ಅಪ್
Wednesday, April 29, 2026
ಮಂಗಳೂರು: ಮೂಡಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಆಯೋಜಿಸಲಾದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಅತ್ಯುತ್ತಮ ಸಾಧನೆ ತೋರಿದೆ.
ಕ್ರೀಡಾಕೂಟದ ಉದ್ದಕ್ಕೂ ಸಮರ್ಥ ಪ್ರದರ್ಶನ ನೀಡಿದ ಕಾಲೇಜಿನ ಪುರುಷರ ತಂಡವು ರನ್ನರ್ಸ್ ಅಪ್ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಮಹಿಳಾ ತಂಡವು ದ್ವಿತೀಯ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದೆ.
ಪುರುಷರ ವಿಭಾಗದಲ್ಲಿ ವೈಯಕ್ತಿಕವಾಗಿ ಸಾಧನೆ ಮಾಡಿದ ಪ್ರಥಮ್ ಬಂಗೇರ-ಪ್ರಥಮ ಬಿ.ಕಾಂ. ಚಿನ್ನದ ಪದಕ, ಸೃಜನ್-ಪ್ರಥಮ ಎಂಬಿಎ ಬೆಳ್ಳಿ ಪದಕ ಹಾಗೂ ಸಾತ್ವಿಕ್-ದ್ವಿತೀಯ ಬಿಎ(ಎಚ್‌ಆರ್ಡಿ), ಅನ್ವೇಶ್-ಪ್ರಥಮ ಎಂಬಿಎ ಮತ್ತು ಸ್ವಸ್ತಿಕ್-ಪ್ರಥಮ ಬಿಬಿಎ ಇವರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಚುಹಾನಾ ಎ.ವಿ.-ತೃತೀಯ ಬಿ.ಕಾಂ.-ಬೆಳ್ಳಿ ಪದಕವನ್ನು ಪಡೆದು, ಕುಶಿ-ತೃತೀಯ ಬಿಬಿಎ, ಅನ್ವಿತಾ-ತೃತೀಯ ಬಿಬಿಎ ಮತ್ತು ರಕ್ಷಾ-ದ್ವಿತೀಯ ಎಂಬಿಎ ಕಂಚಿನ ಪದಕಗಳನ್ನು ಗಳಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ.
ಕಾಲೇಜಿನ ಕ್ರೀಡಾ ಕ್ಷೇತ್ರದಲ್ಲಿ ಈ ಸಾಧನೆಯು ಒಂದು ಮಹತ್ವದ ಮೈಲುಗಲ್ಲಾಗಿದ್ದು, ವಿಜೇತ ಕ್ರೀಡಾಪಟುಗಳನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
