ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಮೊಹಮ್ಮದ್ ಶಾರೀಖ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹ: ಶಾಸಕ ಕಾಮತ್
Monday, April 27, 2026
ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿಕೊಂಡಿದ್ದ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಮೊಹಮ್ಮದ್ ಶಾರೀಖ್ ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು ಸ್ವಾಗತಾರ್ಹವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.
ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡಿದ್ದ ಇಂತಹವರನ್ನೂ ಸಹ ಆವತ್ತು "ಅಮಾಯಕ" "ಬ್ರದರ್ಸ್" "ಇದು ಸಣ್ಣ ಘಟನೆ" ಎಂದೆಲ್ಲಾ ಸಮರ್ಥನೆಗೆ ಇಳಿದಿದ್ದ ಕಾಂಗ್ರೆಸ್ಸಿಗರು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರುವ ಕಾಂಗ್ರೆಸ್ಸಿಗರಿಂದ ರಾಜ್ಯದ ರಕ್ಷಣೆ ಎಷ್ಟರಮಟ್ಟಿಗೆ ಸಾಧ್ಯ ಎಂದು ಈಗ ಜನರಲ್ಲಿ ಪ್ರಶ್ನೆ ಮೂಡುವುದು ಸಹಜವಾಗಿದೆ. ಮಾನ್ಯ ನ್ಯಾಯಾಲಯವು ನೀಡಿರುವ ತೀರ್ಪು ಶಾರೀಖ್‌ನಂತೆ ಭಯೋತ್ಪಾದನೆಯ ಹಾದಿ ಹಿಡಿಯುವ ಎಲ್ಲಾ ಉಗ್ರರಿಗೆ ಎಂದಿಗೂ ಮರೆಯಲಾಗದ ಪಾಠವಾಗಲಿ ಎಂದು ಹೇಳಿದರು.
ಘಟನೆಯಲ್ಲಿ ಅಂದು ಗಾಯಗೊಂಡಿದ್ದ ಅಮಾಯಕ ಪುರುಷೋತ್ತಮ್ ಪೂಜಾರಿಯವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ಪರಿಹಾರ ಸಹಿತ ಹೊಸ ಆಟೋ ರಿಕ್ಷಾ ಒದಗಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ಒಂದು ಹಂತದ ನ್ಯಾಯವಾದರೆ, ಇಂದಿನ ನ್ಯಾಯಾಲಯದ ತೀರ್ಪು ಮತ್ತೊಂದು ಹಂತದ ನ್ಯಾಯವಾಗಿದೆ ಎಂದರು.