ಎಂಆರ್‌ಪಿಎಲ್ ನಾಲ್ಕನೇ ತ್ರೈಮಾಸಿಕದಲ್ಲಿ 119 ಕೋ.ರೂ. ನಿವಳ ಲಾಭ

ಎಂಆರ್‌ಪಿಎಲ್ ನಾಲ್ಕನೇ ತ್ರೈಮಾಸಿಕದಲ್ಲಿ 119 ಕೋ.ರೂ. ನಿವಳ ಲಾಭ

ಮಂಗಳೂರು: ಎಂಆ‌ರ್ ಪಿಎಲ್ ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ 119 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ಶುಕ್ರವಾರ ನಡೆದ ಕಂಪೆನಿಯ 274 ನೇ ಸಭೆಯಲ್ಲಿನಾಲ್ಕನೇ ತ್ರೈಮಾಸಿಕ ಹಾಗೂ 2025-26 ನೇ ಸಾಲಿನ ವಾರ್ಷಿಕ ಫಲಿತಾಂಶಗಳನ್ನು ಅನುಮೋದಿಸಲಾಯಿತು. ಹಿಂದಿನ ಅವಧಿಯ ಇದೇ ಅವಧಿ ಯಲ್ಲಿ 363 ಕೋಟಿ ರೂ. ಗಳಿಸಿತ್ತು. ಒಟ್ಟು ಲಾಭವು ಹಿಂದಿನ ಸಾಲಿನ 584 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 1235 ಕೋಟಿ ರೂ.ಗೆ ಏರಿಕೆಯಾಗಿದೆ. ನಿರ್ವಹಣಾ ಆದಾಯವು 27,602 ಕೋಟಿ ರೂ. ಇದ್ದುದು 28,493 ಕೋಟಿ ರೂ.ಗೆ ಏರಿಕೆಯಾಗಿದೆ.

ಲೆಕ್ಕಾಚಾರದಲ್ಲಿ 1,09,280 ಕೋಟಿ ರೂ. ನಿಂದ ಆದಾಯ 1,05,155 ಕೋ .ರೂ.ಗೆ ಇಳಿಕೆ ಕಂಡಿದೆ. ಒಟ್ಟು ನಿವ್ವಳ ಆದಾಯವು ಹಿಂದಿನ ಸಾಲಿನಲ್ಲಿ 51 ಕೋಟಿ ರೂ. ಇದ್ದರೆ ಈ ಬಾರಿ 1931 ಕೋ.ರೂ. ಗೆ ಏರಿಕೆಯಾಗಿದೆ. ಒಟ್ಟು ಲಾಭವು ಹಿಂದಿನ ಸಾಲಿನ 113 ಕೋ.ರೂ ನಿಂದ 4022 ಕೋ.ರೂ.ಗೆ ಏರಿದೆ. ಕಂಪೆನಿಯ ದೇವಂಗೊಂತಿ ಮಾರ್ಕೆಟಿಂಗ್ ಟರ್ಮಿನಲ್ ಪೂರ್ಣವಾಗಿ ಕಾರ್ಯಾ ಚರಣೆ ಆರಂಭಿಸಿದೆ, ಕಳೆದ ಹಣಕಾಸು ವರ್ಷದಲ್ಲಿ ಕಂಪೆನಿಯು ಒಟ್ಟು 85 ಹೊಸ ಚಿಲ್ಲರೆ ಮಾರಾಟದ ಸ್ಟೇಷನ್ ಗಳನ್ನು ಆರಂಭಿಸಿರುವುದಾಗಿ ಪ್ರಕಟನೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article